ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಇತಿಹಾಸ ನಿರ್ಮಿಸಿದ್ದಾರೆ. ಶತಕವನ್ನ ದ್ವಿಶತವಾಗಿ ಪರಿವರ್ತಿಸಿದ್ ಕರುಣ್ ನಾಯರ್, ದ್ವಿಶತಕವನ್ನ ತ್ರಿಶಕವಾಗಿ ಪರಿವರ್ತಿಸಿದ್ದಾರೆ. ಮೊದಲ ಶತಕವನ್ನೇ ತ್ರಿಶತಕವಾಗಿ ಪರಿವರ್ತಿಸಿದ ಮೊದಲ ಭಾರತೀಯ ಬ್ಯಾಟ್ಸ್`ಮನ್ ಎಂಬ ಖ್ಯಾತಿಗೆ ಕರುಣ್ ನಾಯರ್ ಪಾತ್ರರಾಗಿದ್ದಾರೆ. 

ಚೆನ್ನೈ(ಡಿ.19): ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಇತಿಹಾಸ ನಿರ್ಮಿಸಿದ್ದಾರೆ. ಶತಕವನ್ನ ದ್ವಿಶತವಾಗಿ ಪರಿವರ್ತಿಸಿದ್ದ ಕರುಣ್ ನಾಯರ್, ದ್ವಿಶತಕವನ್ನ ತ್ರಿಶಕವಾಗಿ ಪರಿವರ್ತಿಸಿದ್ದಾರೆ. ಮೊದಲ ಶತಕವನ್ನೇ ತ್ರಿಶತಕವಾಗಿ ಪರಿವರ್ತಿಸಿದ ಮೊದಲ ಭಾರತೀಯ ಮತ್ತು ತ್ರಿಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್`ಮನ್ ಎಂಬ ಖ್ಯಾತಿಗೆ ಕರುಣ್ ನಾಯರ್ ಪಾತ್ರರಾಗಿದ್ದಾರೆ. ಕರುಣ್ ನಾಯರ್ ಅವರ ಈ ಅಮೋಘ ಆಟದಲ್ಲಿ 31 ಬೌಂಡರಿ ಮತ್ತು 4 ಅಮೋಘ ಸಿಕ್ಸರ್`ಗಳಿದ್ದವು.

ವೀರೇಂದ್ರ ಸೆಹ್ವಾಗ್ 2004ರಲ್ಲಿ ಪಾಕಿಸ್ತಾನ ವಿರುದ್ಧ 309 ರನ್ ಮತ್ತು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಸಿಡಿಸಿದ್ದರು. ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೆ ಕರುಣ್ ನಾಯರ್ ಪಾತ್ರರಾಗಿದ್ದಾರೆ.

ಕರುಣ್ ತ್ರಿಶತಕ ಪೂರೈಸುತ್ತಲೇ ಟೀಮ್ ಇಂಡಿಯಾ 759/7 ರನ್`ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ನಿನ್ನೆ ಮತ್ತೊಬ್ಬ ಕನ್ನಡಿಗ ಕೆ,ಎಲ್. ರಾಹುಲ್ 199 ರನ್`ಗೆ ಔಟ್ ಆಗುವ ಮೂಲಕ ದ್ವಿಶತಕ ವಂಚಿತರಾಗಿದ್ದರು.