ಇತ್ತೀಚೆಗಷ್ಟೇ ಸೌರಾಷ್ಟ್ರ ತಂಡವನ್ನು ಮಣಿಸಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಗಾಯದಿಂದಾಗಿ ವಿನಯ್ ಕುಮಾರ್ ಕಳೆದ ಟೂರ್ನಿಯ ಮಧ್ಯದಲ್ಲೇ ಹೊರಗುಳಿದಿದ್ದರು. ವಿನಯ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕರುಣ್ ನಾಯರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಸಫಲವಾಗಿದ್ದರು.

ಬೆಂಗಳೂರು(ಮಾ.01): ವಿಜಯ್ ಹಜಾರೆ ಟ್ರೋಫಿ ಗೆದ್ದು ದೇವಧರ್ ಟ್ರೋಫಿಗೆ ಅರ್ಹತೆ ಪಡೆದ ಕರ್ನಾಟಕ ತಂಡವನ್ನು, ಪಂದ್ಯಾವಳಿಯಲ್ಲಿ ಕರುಣ್ ನಾಯರ್ ಮುನ್ನಡೆಸಲಿದ್ದಾರೆ.

ಇತ್ತೀಚೆಗಷ್ಟೇ ಸೌರಾಷ್ಟ್ರ ತಂಡವನ್ನು ಮಣಿಸಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಗಾಯದಿಂದಾಗಿ ವಿನಯ್ ಕುಮಾರ್ ಕಳೆದ ಟೂರ್ನಿಯ ಮಧ್ಯದಲ್ಲೇ ಹೊರಗುಳಿದಿದ್ದರು. ವಿನಯ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕರುಣ್ ನಾಯರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಸಫಲವಾಗಿದ್ದರು.

ತಂಡ: ಕರುಣ್ (ನಾಯಕ),ಮಯಾಂಕ್, ಸಮರ್ಥ್, ಅಭಿಷೇಕ್, ಬಿನ್ನಿ, ಸಿ.ಎಂ.ಗೌತಮ್, ಪವನ್, ಕೆ.ಗೌತಮ್, ಶ್ರೇಯಸ್, ಪ್ರಸಿದ್ಧ್, ಮಿಥುನ್, ರೋನಿತ್, ಸುಚಿತ್, ಪ್ರದೀಪ್, ಶರತ್.