ನಾನು ನಿಜವಾಗಿಯೂ ಲಕ್ಕಿ ಅದಕ್ಕೆ ಇನ್ನೂ ಬದುಕಿದ್ದೇನೆ ಎಂದ ಕರುಣ್ ನಾಯರ್
ಚೆನ್ನೈ(ಡಿ.20): ಚೆನ್ನೈ ಟೆಸ್ಟ್`ನ ನಿನ್ನೆಯ ಆಟ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಕರ್ನಾಟಕದ ಬ್ಯಾಟ್ಸ್`ಮನ್ ಕರುಣ್ ನಾಯರ್ ರನ್ ಹೊಳೆ ಹರಿಸಿದ ಸಂಭ್ರಮದ ದಿನ. ಕರುಣ್ ನಾಯರ್ ತ್ರಿಶತಕವನ್ನ ಇಡೀ ದೇಶದ ಅಭಿಮಾನಿಗಳು ಸಂಭ್ರಮಿಸಿದ್ಧಾರೆ. ಇಂತಹ ಸಂಭ್ರಮದಲ್ಲೂ ಕರುಣ್ ನಾಯರ್ ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವೊಂದನ್ನ ಮೆಲುಕು ಹಾಕಿದ್ದಾರೆ.
`ಈ ವರ್ಷಾರಂಭದಲ್ಲಿ ಕೇರಳದಲ್ಲಿ ಬೋಟ್ ಅಪಘಾತದಲ್ಲಿ ಪಾರಾಗಿ ಬಂದ ಬಗ್ಗೆ ಕರುಣ್ ನಾಯರ್ ಹೇಳಿಕೊಂಡಿದ್ದಾರೆ. `ನನಗೆ ಈಜು ಬರುತ್ತಿರಲಿಲ್ಲ. ಅಲ್ಲಿದ್ದ ಜನ ನನ್ನನ್ನ ರಕ್ಷಿಸಿದರು. ನಾನು ನಿಜವಾಗಿಯೂ ಲಕ್ಕಿ ಅದಕ್ಕೆ ಇನ್ನೂ ಬದುಕಿದ್ದೇನೆ' ಎಂದಿದ್ದಾರೆ.
ಇದೇವೇಳೆ, ಮೈದಾನದಲ್ಲಿ ತನ್ನ ಬೆನ್ನು ತಟ್ಟಿ ಬೆಂಬಲಿಸಿದ ಕೆ.ಎಲ್. ರಾಹುಲ್, ಜಡೇಜಾ ಮತ್ತು ಅಶ್ವಿನ್ ಅವರನ್ನ ಕರುಣ್ ಸ್ಮರಿಸಿದ್ಧಾರೆ.
