ಇಂದಿನಿಂದ ಯುಎಸ್ ಓಪನ್ ; ಋತುವಿನ ಕೊನೆ ಗ್ರ್ಯಾಂಡ್‌ಸ್ಲಾಮ್
ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಇಂದಿನಿಂದ (ಸೋಮವಾರದಿಂದ) ಆರಂಭವಾಗಲಿದೆ. 139 ನೇ ಯುಎಸ್ ಓಪನ್ ಇದಾಗಿದ್ದು, ಸೆ.8 ರವರೆಗೆ ನಡೆಯಲಿದೆ.
ನ್ಯೂಯಾರ್ಕ್ (ಆ. 26): ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಸೋಮವಾರದಿಂದ ಆರಂಭವಾಗಲಿದೆ. 139 ನೇ ಯುಎಸ್ ಓಪನ್ ಇದಾಗಿದ್ದು, ಸೆ.8 ರವರೆಗೆ ನಡೆಯಲಿದೆ.
ಪುರುಷರ ವಿಭಾಗದಲ್ಲಿ ವಿಶ್ವ ನಂ.1, ಹಾಲಿ ಚಾಂಪಿ ಯನ್ ನೊವಾಕ್ ಜೋಕೋವಿಚ್, ಸ್ಪೇನ್‌ನ ರಫೇಲ್ ನಡಾಲ್, ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ನವೊಮಿ ಒಸಾಕಾ ಪ್ರಮುಖ ಆಕರ್ಷಣೆಯಾಗಿದ್ದಾರೆ.
6 ನೇ ಪ್ರಶಸ್ತಿಗೆ ಫೆಡರರ್ ಕಣ್ಣು : 38 ವರ್ಷದ ಫೆಡರರ್ 2004 ರಿಂದ 2008 ರ ವರೆಗೆ ಸತತವಾಗಿ 5 ಬಾರಿ ಚಾಂಪಿಯನ್ ಆಗಿದ್ದು, 6 ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಸೆರೆನಾ ಗೆಲ್ತಾರಾ?:ಹಾಲಿ ಚಾಂಪಿಯನ್ ಒಸಾಕಾ, 6 ಬಾರಿ ಚಾಂಪಿಯನ್ ಸೆರೆನಾ ಹಾಟ್ ಫೇವರಿಟ್ ಆಗಿದ್ದಾರೆ.
2017 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ಯಾವುದೇ ಗ್ರ್ಯಾಂಡ್‌ಸ್ಲಾಮ್ ಗೆಲ್ಲದ ಸೆರೆನಾ ತವರಿನಲ್ಲಿ ಪ್ರಶಸ್ತಿ ಗೆಲ್ಲುತ್ತಾರಾ ಎಂಬ ಕುತೂಹಲವಿದೆ.ಸೆರೆನಾ ಮೊದಲ ಸುತ್ತಲ್ಲಿ ಶರಪೋವಾರನ್ನು ಎದುರಿಸಲಿದ್ದಾರೆ.