ವಿಜಯ್ ಹಜಾರೆ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಸೋಮವಾರ ಕೆಎಸ್'ಸಿಎ 16 ಆಟಗಾರರ ತಂಡವನ್ನು ಪ್ರಕಟಿಸಿತು. ಬಲಿಷ್ಠ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, 'ದಾವಣಗೆರೆ ಎಕ್ಸ್'ಪ್ರೆಸ್' ಖ್ಯಾತಿಯ ಆರ್. ವಿನಯ್ ಕುಮಾರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್'ವಾಲ್ ಹಾಗೂ ಕೆ. ಗೌತಮ್ ಮೇಲೆ ಸಾಕಷ್ಠು ನಿರೀಕ್ಷೆಯಿಡಲಾಗಿದೆ.

ಬೆಂಗಳೂರು(ಫೆ.06): ಸೋಮವಾರದಿಂದ ವಿಜಯ್ ಹಜಾರೆ ಏಕದಿನ ಪಂದ್ಯಾವಳಿ ಆರಂಭಗೊಂಡಿದ್ದು, ಬುಧವಾರ ದಿಂದ ಕರ್ನಾಟಕ ತನ್ನ ಅಭಿಯಾನ ಆರಂಭಿಸಲಿದೆ.

ವಿಜಯ್ ಹಜಾರೆ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಸೋಮವಾರ ಕೆಎಸ್'ಸಿಎ 16 ಆಟಗಾರರ ತಂಡವನ್ನು ಪ್ರಕಟಿಸಿತು. ಬಲಿಷ್ಠ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, 'ದಾವಣಗೆರೆ ಎಕ್ಸ್'ಪ್ರೆಸ್' ಖ್ಯಾತಿಯ ಆರ್. ವಿನಯ್ ಕುಮಾರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್'ವಾಲ್ ಹಾಗೂ ಕೆ. ಗೌತಮ್ ಮೇಲೆ ಸಾಕಷ್ಠು ನಿರೀಕ್ಷೆಯಿಡಲಾಗಿದೆ.

ತಂಡ ಇಂತಿದೆ:

ವಿನಯ್ (ನಾಯಕ), ಕೆ.ಎಲ್.ರಾಹುಲ್, ಮಯಾಂಕ್, ಕರುಣ್, ಸಮರ್ಥ್, ಪವನ್, ಗೌತಮ್ ಸಿ.ಎಂ., ಶ್ರೇಯಸ್ ಗೋಪಾಲ್, ಕೆ. ಗೌತಮ್, ಮಿಥುನ್, ಪ್ರಸಿದ್ಧ್, ಪ್ರದೀಪ್, ಅನಿರುದ್ಧ್, ಜೆ. ಸುಚಿತ್, ರಿತೇಶ್, ಪ್ರವಿಣ್ ದುಬೆ.