ಸಮರ್ಥ್ 183 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸ್'ರ್'ನೊಂದಿಗೆ 126 ರನ್ ಪೇರಿಸಿದರೆ, ತ್ರಿಶಕ ವೀರ ಮಾಯಾಂಕ್ 171 ಚಂಡುಗಳಲ್ಲಿ 12 ಬೌಂಡರಿ, 2 ಭರ್ಜರಿ ಸಿಕ್ಸ್'ರ್'ನೊಂದಿಗೆ 133 ರನ್ ಬಾರಿಸಿದರು.
ಕಾನ್ಪುರ(ನ.20): ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆದ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 'ಎ' ಗುಂಪಿನಲ್ಲಿ 26 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ ಕರ್ನಾಟಕ ಇನ್ನೂ ಒಂದು ಪಂದ್ಯವಿರುವಾಗಲೆ ಕ್ವಾರ್ಟ್'ರ್ ಫೈನಲ್ ಪ್ರವೇಶಿಸಿದೆ.
ಅಂತಿಮ ದಿನ ನಡೆದ ಆಟದಲ್ಲಿ ಉತ್ತರ ಪ್ರದೇಶದ ಆಟಗಾರರು ಮೊದಲ ಇನ್ನಿಂಗ್ಸ್'ನಲ್ಲಿ 331 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು 234 ರನ್'ಗಳ ಹಿನ್ನಡೆ ಅನುಭವಿಸಿತು. ರಿಂಕು ಸಿಂಗ್ 71 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 73 ರನ್ ಬಾರಿಸಿದರು. ಉಪೇಂದ್ರ ಯಾದವ್ ಔಟಾಗದೆ 48(66) ರನ್' ಗಳಿಸಿದರೆ ಇನ್ನುಳಿದವರ್ಯಾರು 20ರ ಗಡಿ ದಾಟಲಿಲ್ಲ. ರಾಜ್ಯದ ಪರ ಶ್ರೇಯಸ್ ಗೋಪಾಲ್ 63/3, ರೋಹಿತ್ ಮೋರೆ ಹಾಗೂ ಕೆ.ಗೌತಮ್ 114/2 ವಿಕೇಟ್ ಗಳಿಸಿ ಅತ್ಯುತ್ತಮ ಬೌಲರ್ ಎನಿಸಿದರು.
ಸಮರ್ಥ್, ಮಾಯಾಂಕ್ ಆಕರ್ಷಕ ಶತಕ
234 ರನ್ ಇನ್ನಿಂಗ್ಸ್ ಮುನ್ನಡೆ ಪಡೆದರೂ ಯುಪಿ ತಂಡದ ಮೇಲೆ ಫಾಲೋ'ಆನ್ ಹೇರದೆ ಕರ್ನಾಟಕ ತಂಡ ತಾವೆ 2ನೇ ಇನ್ನಿಂಗ್ಸ್ ಆರಂಭಿಸಿದರು. ಆರಂಭಿಕ ಆಟಗಾರರಾದ ಆರ್. ಸಮರ್ಥ್ ಹಾಗೂ ಮಾಯಾಂಕ್ ಅಗರ್'ವಾಲ್ ಉತ್ತಮವಾಗಿಯೇ ಬ್ಯಾಟ್ ಮಾಡಲು ಶುರು ಮಾಡಿದರು. ದಿನದ ಕೊನೆ(59 ಓವರ್)ಯವರೆಗೆ ಆಡಿದ ಇಬ್ಬರೂ ಅಜೇಯರಾಗಿ ಭರ್ಜರಿ ಶತಕ ದಾಖಲಿಸಿದರು. ಸಮರ್ಥ್ 183 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸ್'ರ್'ನೊಂದಿಗೆ 126 ರನ್ ಪೇರಿಸಿದರೆ, ತ್ರಿಶಕ ವೀರ ಮಾಯಾಂಕ್ 171 ಚಂಡುಗಳಲ್ಲಿ 12 ಬೌಂಡರಿ, 2 ಭರ್ಜರಿ ಸಿಕ್ಸ್'ರ್'ನೊಂದಿಗೆ 133 ರನ್ ಬಾರಿಸಿದರು. ಎದುರಾಳಿ ತಂಡದ 8 ಮಂದಿ ಬೌಲಿಂಗ್ ಮಾಡಿದರೂ ಇವರಿಬ್ಬರನ್ನು ಪೆವಿಲಿಯನ್'ಗೆ ಕಳಿಸಲು ಸಾಧ್ಯವಾಗಲಿಲ್ಲ. ರಾಜ್ಯವು 262/0 ಗಳಿಸಿದ್ದಾಗ ಪಂದ್ಯ ಮುಕ್ತಾಯವಾಯಿತು.
ರಾಜ್ಯ ತಂಡ 8ರ ಘಟ್ಟ ತಲುಪಿರುವುದರಿಂದ, ನ.25 ರಂದು ನವದೆಹಲಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯ ರೈಲ್ವೆಸ್ ವಿರುದ್ಧ ನಡೆಯಲಿದ್ದು, ಬಹುತೇಕ ಪಂದ್ಯ ಔಪಚಾರಿಕ ಪಂದ್ಯವಾಗಲಿದೆ.
ಸ್ಕೋರ್
ಕರ್ನಾಟಕ ಮೊದಲ ಇನ್ನಿಂಗ್ಸ್ 655/10 ಹಾಗೂ 2ನೇ ಇನ್ನಿಂಗ್ಸ್ 262/0
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 331/10
ಫಲಿತಾಂಶ: ಡ್ರಾ
ಅಂಕ: ಕರ್ನಾಟಕ: 3, ಉತ್ತರಪ್ರದೇಶ:1
