ಎಚ್ಚರಿಕೆಯಿಂದ ಆಡುತ್ತಿದ್ದ ಸಂದೀಪ್ ವಿಕೆಟ್ ಒಪ್ಪಿಸುತ್ತಿದ್ದಂತೆ ತರಗೆಲೆಗಳಂತೆ ಉದುರಿ ಹೋದ ಹೈದರಾಬಾದ್ 320 ರನ್'ಗಳಿಗೆ ಸರ್ವಪತನ ಕಂಡಿತು.

ಶಿವಮೊಗ್ಗ(ಅ.27): ಯುವ ಸ್ಪಿನ್ನರ್'ಗಳಾದ ಶ್ರೇಯಸ್ ಗೋಪಾಲ್ ಹಾಗೂ ಕೆ. ಗೌತಮ್ ಅವರ ಆಕರ್ಷಕ ಬೌಲಿಂಗ್ ನೆರವಿನಿಂದ ಹೈದರಾಬಾದ್ ವಿರುದ್ಧ ಕರ್ನಾಟಕ ತಂಡ 59 ರನ್'ಗಳ ಭರ್ಜರಿ ಜಯ ದಾಖಲಿಸಿದೆ.

ಇಲ್ಲಿನ ಕೆಎಸ್'ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 320 ರನ್'ಗಳಿಗೆ ಆಲೌಟ್ ಮಾಡಿದ ಆರ್. ವಿನಯ್ ಕುಮಾರ್ ಪಡೆ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಪಂದ್ಯದ ಕೊನೆಯ ದಿನ ಹೈದರಾಬಾದ್ ಗೆಲ್ಲಲು 288 ರನ್'ಗಳನ್ನು ಗಳಿಸಬೇಕಿತ್ತು. ಆದರೆ ಎಸ್. ಗೋಪಾಲ್ ಹಾಗೂ ಕೆ. ಗೌತಮ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಾವನಕ ಸಂದೀಪ್(80) ಹಾಗೂ ಆಶೀಶ್ ರೆಡ್ಡಿ(57*) ಜೋಡಿ ಕರ್ನಾಟಕದ ಗೆಲುವಿಗೆ ಕೆಲಕಾಲ ತಡೆಯಾಗಿದ್ದರು. ಆದರೆ ಈ ಜೋಡಿಯನ್ನು ನಾಯಕ ವಿನಯ್ ಕುಮಾರ್ ಬೇರ್ಪಡಿಸಿದರು. ಎಚ್ಚರಿಕೆಯಿಂದ ಆಡುತ್ತಿದ್ದ ಸಂದೀಪ್ ವಿಕೆಟ್ ಒಪ್ಪಿಸುತ್ತಿದ್ದಂತೆ ತರಗೆಲೆಗಳಂತೆ ಉದುರಿ ಹೋದ ಹೈದರಾಬಾದ್ 320 ರನ್'ಗಳಿಗೆ ಸರ್ವಪತನ ಕಂಡಿತು. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಆಡಿದ ಆಶೀಸ್ ರೆಡ್ಡಿ 57 ರನ್ ಬಾರಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ: 183/10&332/10

ಹೈದರಾಬಾದ್: 136/10&320/10

ಪಂದ್ಯ ಪುರುಷೋತ್ತಮ : ಕರುಣ್ ನಾಯರ್