ಆರಂಭಿಕ ಆಟಗಾರ ಕೆ.ಎಲ್. ರಾಹುಲ್, ರಾಷ್ಟ್ರೀಯ ತಂಡಕ್ಕೆ ಮರಳಿರುವುದರಿಂದ ಅವರ ಸ್ಥಾನದಲ್ಲಿ ಅರ್ಜುನ್ ಹೊಯ್ಸಳ, ಡೇವಿಡ್ ಮಥೈಸ್ ಅಥವಾ ರೋನಿತ್ ಮೊರೆ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಬೆಂಗಳೂರು(ನ.19): ಇದೇ 21ರಿಂದ 24ರವರೆಗೆ ದೆಹಲಿಯ ಮಾಡೆಲ್ ಕ್ರೀಡಾ ಸಂಕೀರ್ಣದ ಪಾಲಮ್ ‘ಎ’ ಮೈದಾನದಲ್ಲಿ ನಡೆಯುವ ಒರಿಸ್ಸಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ.

ಬಹುತೇಕ ರಾಜಸ್ಥಾನ ವಿರುದ್ಧ ಕಣಕ್ಕಿಳಿದಿದ್ದ ಪಂದ್ಯವನ್ನೇ ಉಳಿಸಿಕೊಳ್ಳಲಾಗಿದೆ. ಆದರೆ ಆರಂಭಿಕ ಆಟಗಾರ ಕೆ.ಎಲ್. ರಾಹುಲ್, ರಾಷ್ಟ್ರೀಯ ತಂಡಕ್ಕೆ ಮರಳಿರುವುದರಿಂದ ಅವರ ಸ್ಥಾನದಲ್ಲಿ ಅರ್ಜುನ್ ಹೊಯ್ಸಳ, ಡೇವಿಡ್ ಮಥೈಸ್ ಅಥವಾ ರೋನಿತ್ ಮೊರೆ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪ್ರಸಕ್ತ ರಣಜಿಯಲ್ಲಿ ಕರ್ನಾಟಕ ತಂಡ ಆಡಿರುವ 5 ಪಂದ್ಯಗಳಲ್ಲಿ ಮೊದಲ ಪಂದ್ಯ ಡ್ರಾ ಸಾಧಿಸಿದ್ದು ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. ಒರಿಸ್ಸಾ ವಿರುದ್ಧದ ಪಂದ್ಯದಲ್ಲೂ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿ ವಿನಯ್ ಬಳಗವಿದೆ.

ಕರ್ನಾಟಕ ತಂಡ

ವಿನಯ್ ಕುಮಾರ್ (ನಾಯಕ), ಸಿ.ಎಂ. ಗೌತಮ್, ಸಮರ್ಥ ಆರ್, ಮಯಾಂಕ್ ಅಗರ್‌ವಾಲ್, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಎಸ್. ಅರವಿಂದ, ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಬ್ರಾರ್ ಖಾಜಿ, ಮಿರ್ ಕುನೈನ್ ಅಬ್ಬಾಸ್, ಪವನ್ ದೇಶಪಾಂಡೆ, ಅರ್ಜುನ್ ಹೊಯ್ಸಳ, ರೋನಿತ್ ಮೊರೆ, ಪ್ರಸಿದ್ಧ್ ಕೃಷ್ಣ, ಡೇವಿಡ್ ಮಥೈಸ್