ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪಕ್ರಿಯೆ ಕೆಲ ಅಚ್ಚರಿ ಹಾಗೂ ನಿರಾಸೆಗೆ ಕಾರಣವಾಗಿದೆ. ರಣಜಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರು ಈ ಬಾರಿಯ ಕೆಪಿಎಲ್ ಟೂರ್ನಿಯಲ್ಲಿ ಭಾರಿ ನಿರಾಸೆ ಮೂಡಿಸಿದ್ದಾರೆ. ಹೀಗೆ ನಿರಾಸೆ ಮೂಡಿಸಿದ ಸ್ಟಾರ್ ಪ್ಲೇಯರ್‌ಗಳ ವಿವರ ಇಲ್ಲಿದೆ.

ಬೆಂಗಳೂರು(ಜು.21): 7ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳೊಂದಿಗೆ ಮುಕ್ತಾಯವಾಗಿದೆ. ವೇಗಿ ಅಭಿಮನ್ಯು ಮಿಥುನ್ ಗರಿಷ್ಠ ಮೊತ್ತಕ್ಕೆ ಬಿಕರಿಯಾದರೆ, ಹಲವು ಪ್ರಮುಖ ಆಟಗಾರರು ಮೂಲ ಬೆಲೆಗೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್ ಟೂರ್ನಿ, ಇಂಡಿಯಾ ಎ ಹಾಗೂ ರಣಜಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಮಯಾಂಕ್ ಅಗರ್ವಾಲ್, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಕೆ ಗೌತಮ್, ಕೆಕೆಆರ್ ತಂಡದಲ್ಲಿ ಮಿಂಚಿದ ಪ್ರಸಿದ್ ಕೃಷ್ಣ ಸೇರಿದಂತೆ ಹಲವು ಆಟಗಾರರನ್ನ ಆರಂಭದಲ್ಲಿ ಯಾವ ಫ್ರಾಂಚೈಸಿ ಕೂಡ ಖರೀದಿಸಲೇ ಇಲ್ಲ.

ಅಂತಿಮ ಹಂತದಲ್ಲಿ ಮಯಾಂಕ್, ಕೆ ಗೌತಮ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಮೂಲ ಬೆಲೆಗೆ ಹರಾಜಾಗಿ ಅಚ್ಚರಿ ಮೂಡಿಸಿದರು. ಆದರೆ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನ ಯಾವ ಫ್ರಾಂಚೈಸಿ ಕೂಡ ಖರೀದಿಸಲೇ ಇಲ್ಲ. ಹೀಗಾಗಿ ಶ್ರೇಯಸ್ ಗೋಪಾಲ್ ಅನ್‌ಸೋಲ್ಡ್ ಆಗಿ ಉಳಿದರು.

ನಿರಾಸೆ ಮೂಡಿಸಿದ ಆಟಗಾರರು:

ಆಟಗಾರುತಂಡಮೊತ್ತ
ಕೆ ಗೌತಮ್ಮೈಸೂರ್ ವಾರಿಯರ್ಸ್25,000
ಮಯಾಂಕ್ ಅಗರ್ವಾಲ್ಹುಬ್ಬಳ್ಳಿ ಟೈಗರ್ಸ್25,000
ಪ್ರಸಿದ್ಧ ಕೃಷ್ಣಮೈಸೂರು ವಾರಿಯರ್ಸ್35,000