ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಪಿಎಲ್ ಹರಾಜು ಪ್ರಕ್ರಿಯೆ ಮೂಲಕ 7ನೇ ಆವೃತ್ತಿ ಟೂರ್ನಿಯ ತಯಾರಿ ಆರಂಭಗೊಂಡಿದೆ. ಹರಾಜಿನಲ್ಲಿ ಓಟ್ಟು 244 ಆಟಗಾರರು ಲಭ್ಯರಿದ್ದಾರೆ. ಪೂಲ್ 'ಎ' ವಿಭಾಗದಲ್ಲಿ 20, ಪೂಲ್ 'ಬಿ' ನಲ್ಲಿ 224 ಆಟಗಾರರು ಹರಾಜಿನಲ್ಲಿದ್ದಾರೆ.  ಇದರಲ್ಲಿ ಪೂಲ್ 'ಎ' ವಿಭಾಗದ ಹರಾಜು ವಿವರ ಇಲ್ಲಿದೆ.


ಬೆಂಗಳೂರು(ಜು.21):  ಬೆಂಗಳೂರಿನ ಚಿನ್ನಸ್ವಾಮಿ ಕೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ 7ನೇ ಆವೃತ್ತಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಕೆಪಿಎಲ್ ಟೂರ್ನಿಗೆ 7 ತಂಡಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಿದೆ. 

ಪೂಲ್ ಎ ವಿಭಾಗದಲ್ಲಿದ್ದ 20 ಆಟಗಾರರ ಪೈಕಿ 14 ಆಟಗಾರರು ಬಿಕರಿಯಾಗಿದ್ದಾರೆ. ಟೀಂ ಇಂಡಿಯಾ ವೇಗಿ, ರಣಜಿ ತಂಡ ಪ್ರಮುಖ ಆಟಗಾರ ಅಭಿಮನ್ಯು ಮಿಥುನ್ ಈ ಬಾರಿ ಗರಿಷ್ಠ ಮೊತ್ತಕ್ಕೆ ಸೇಲಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಿಥುನ್ 8.30 ಲಕ್ಷ ರೂಪಾಯಿಗೆ ಶಿವಮೊಗ್ಗ ಲಯನ್ಸ್ ತಂಡದ ಪಾಲಾಗಿದ್ದಾರೆ.

ಕಳೆದ ಬಾರಿ ಕೆಪಿಎಲ್ ಟೂರ್ನಿಯಿಂದ ದೂರ ಉಳಿದ್ದ ರಾಬಿನ್ ಉತ್ತಪ್ಪ ಅವರನ್ನ, 7ನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಖರೀಧಿಸಿದೆ. ಉತ್ತಪ್ಪ7.90 ಲಕ್ಷ ರೂಪಾಯಿ ಮೊತ್ತಕ್ಕೆ ಬಿಕರಿಯಾಗೋ ಮೂಲಕ ಗರಿಷ್ಠ ಮೊತ್ತಕ್ಕೆ ಸೇಲಾದ 2ನೇ ಕ್ರಿಕೆಟಿಗ ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ. 

ಬಿಕರಿಯಾದ ಪೂಲ್ ಎ ಆಟಗಾರರ ವಿವರ:

ಆಟಗಾರತಂಡಮೊತ್ತ
ಅಭಿಮನ್ಯು ಮಿಥುನ್ಶಿವಮೊಗ್ಗ ಲಯನ್ಸ್8.30 ಲಕ್ಷ
ರಾಬಿನ್ ಉತ್ತಪ್ಪಬೆಂಗಳೂರು ಬ್ಲಾಸ್ಟರ್ಸ್7.90 ಲಕ್ಷ
ಅಮಿತ್ ವರ್ಮಾಮೈಸೂರ್ ವಾರಿಯರ್ಸ್7.60 ಲಕ್ಷ
ಪ್ರದೀಪ್ ಟಿಬಳ್ಳಾರಿ ಟಸ್ಕರ್ಸ್6.50 ಲಕ್ಷ
ಮೊಹಮ್ಮದ್ ತಾಹಹುಬ್ಬಳ್ಳಿ ಟೈಗರ್ಸ್5 ಲಕ್ಷ
ಪ್ರತೀಕ್ ಜೈನ್ಮೈಸೂರ್ ವಾರಿಯರ್ಸ್4.30 ಲಕ್ಷ
ಹೆಚ್ ಎಸ್ ಶರತ್ಬೆಳಗಾವಿ ಪ್ಯಾಂಥರ್ಸ್4.30 ಲಕ್ಷ
ದಿಕ್ಷಾಂಶು ನೇಗಿಬೆಳಗಾವಿ ಪ್ಯಾಂಥರ್ಸ್4.10 ಲಕ್ಷ
ಸಿಎ ಕಾರ್ತಿಕ್ಬಳ್ಳಾರಿ ಟಸ್ಕರ್ಸ್4 ಲಕ್ಷ
ನಾಗ ಭರತ್ಬಿಜಾಪುರ ಬುಲ್ಸ್2.60 ಲಕ್ಷ
ಕೆವಿ ಸಿದ್ದಾರ್ಥ್ಮೈಸೂರ್ ವಾರಿಯರ್ಸ್2.50 ಲಕ್ಷ
ಶಿಶಿರ ಭವಾನೆಬಿಜಾಪುರ ಬುಲ್ಸ್2.10 ಲಕ್ಷ
ರಿತೇಶ್ ಭಟ್ಕಳ್ಬಿಜಾಪುರ ಬುಲ್ಸ್1.70 ಲಕ್ಷ
ಬಿಆರ್ ಶರತ್ಶಿವಮೊಗ್ಗ ಲಯನ್ಸ್1.30 ಲಕ್ಷ