2018ರ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಬಾರಿಯ ಹರಾಜಿನಲವ್ಲಿ ಕರ್ನಾಟಕ ಐವರು ಕ್ರಿಕೆಟಿಗರು ಗರಿಷ್ಠ ಮೊತ್ತಕ್ಕೆ ಹರಾಜಾದ ಸಾಧನೆ ಮಾಡಿದ್ದಾರೆ. ಈ ಟಾಪ್ 5 ಕ್ರಿಕೆಟಿಗರ ವಿವರ ಇಲ್ಲಿದೆ.

ಬೆಂಗಳೂರು(ಜು.21): ಈ ಭಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಓಟ್ಟು 244 ಆಟಗಾರರು ಪಾಲ್ಗೊಂಡಿದ್ದರು . ಪೂಲ್ 'ಎ' ವಿಭಾಗದಲ್ಲಿ 20, ಪೂಲ್ 'ಬಿ' ನಲ್ಲಿ 224 ಆಟಗಾರರು ಹರಾಜಿನಲ್ಲಿದ್ದರು. ಇದರಲ್ಲಿ ಅಭಿಮನ್ಯು ಮಿಥುನ್, ರಾಬಿನ್ ಉತ್ತಪ್ಪ ಸೇರಿದಂತೆ 5 ಕ್ರಿಕೆಟಿಗರು ಗರಿಷ್ಠ ಮೊತ್ತಕ್ಕೆ ಸೇಲಾಗಿದ್ದಾರೆ.

ಶಿವಮೊಗ್ಗ ಲಯನ್ಸ್ ಈ ಬಾರಿ ವೇಗಿ ಅಭಿಮನ್ಯು ಮಿಥುನ್‌ಗೆ 8.30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಮಿಥುನ್ ಗರಿಷ್ಠ ಮೊತ್ತಕ್ಕೆ ಸೇಲಾದ ಕ್ರಿಕೆಟಿಗ. ಇನ್ನು ರಾಬಿನ್ ಉತ್ತಪ್ಪ ಅವರನ್ನ ಬೆಂಗಳೂರು ಬ್ಲಾಸ್ಟರ್ಸ್ ತಂಡ 7.90 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಗರಿಷ್ಠ ಮೊತ್ತಕ್ಕೇ ಸೇಲಾದ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.

ಗರಿಷ್ಠ ಮೊತ್ತಕ್ಕೇ ಹರಾಜಾದ ಕ್ರಿಕೆಟರ್ಸ್:

ಆಟಗಾರತಂಡಮೊತ್ತ
ಅಭಿಮನ್ಯು ಮಿಥುನ್ಶಿವಮೊಗ್ಗ ಲಯನ್ಸ್8.30 ಲಕ್ಷ
ರಾಬಿನ್ ಉತ್ತಪ್ಪಬೆಂಗಳೂರು ಬ್ಲಾಸ್ಟರ್ಸ್7.90 ಲಕ್ಷ
ಅಮಿತ್ ವರ್ಮಾಮೈಸೂರ್ ವಾರಿಯರ್ಸ್ 7.60 ಲಕ್ಷ
ಪ್ರದೀಪ್ ಟಿ ಬಳ್ಳಾರಿ ಟಸ್ಕರ್ಸ್6.50 ಲಕ್ಷ
ಮೊಹಮ್ಮದ್ ತಾಹಹುಬ್ಬಳ್ಳಿ ಟೈಗರ್ಸ್5 ಲಕ್ಷ