ನವದೆಹಲಿ[ಜು.26]: ಮಂಡಿ ಗಾಯದಿಂದಾಗಿ 9 ತಿಂಗಳ ಕಾಲ ಭಾರತ ರಾಷ್ಟ್ರೀಯ ಹಾಕಿ ತಂಡದಿಂದ ಹೊರಗಿದ್ದ ತಾರಾ ಸ್ಟ್ರೈಕರ್‌, ಕರ್ನಾಟಕದ ಎಸ್‌.ವಿ.ಸುನಿಲ್‌ ತಂಡಕ್ಕೆ ವಾಪಸಾಗಿದ್ದಾರೆ. 

FIH ಹಾಕಿ ಸೀರೀಸ್‌ ಫೈನಲ್ಸ್‌: ಭಾರತ ಚಾಂಪಿಯನ್‌

ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಪರೀಕ್ಷಾರ್ಥ ಟೂರ್ನಿಗೆ ಗುರುವಾರ ಭಾರತ ತಂಡವನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿತು. ಆ ತಂಡದಲ್ಲಿ ಸುನಿಲ್‌ ಸ್ಥಾನ ಪಡೆದಿದ್ದಾರೆ. 

ನಾಯಕ ಮನ್‌ಪ್ರೀತ್‌ ಸಿಂಗ್‌ ಹಾಗೂ ಗೋಲ್‌ಕೀಪರ್‌ ಶ್ರೀಜೇಶ್‌ಗೆ ವಿಶ್ರಾಂತಿ ನೀಡಲಾಗಿದ್ದು, ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ಗೆ ನಾಯಕತ್ವ ವಹಿಸಲಾಗಿದೆ. ಈ ಟೂರ್ನಿ, ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ನೆರವಾಗಿದ್ದು, ಕೆಲ ಹೊಸ ಆಟಗಾರರನ್ನು ಪರೀಕ್ಷಿಸಲು ಅನುಕೂಲವಾಗಲಿದೆ.