35.5 ಓವರ್ನಲ್ಲಿ ಡೆಲ್ಲಿ ಆಲೌಟ್ ಆಯ್ತು. ಮೂವರು ಸೊನ್ನೆ ಸುತ್ತಿದ್ರು. ವೇಗಿಗಳಾದ ಎಸ್. ಅರವಿಂದ್ 4, ಕೆ. ಗೌತಮ್ 3 ಮತ್ತು ಅಭಿಮನ್ಯು ಮಿಥುನ್ 2 ವಿಕೆಟ್ ಕಬಳಿಸಿದ್ರು.
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡ ಕೇವಲ 90 ರನ್ಗೆ ಆಲೌಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕರ್ನಾಟಕ ಫಾಸ್ಟ್ ಬೌಲರ್ಗಳ ಮುಂದೆ ಮಂಕಾಗಿತು. 35.5 ಓವರ್ನಲ್ಲಿ ಡೆಲ್ಲಿ ಆಲೌಟ್ ಆಯ್ತು. ಮೂವರು ಸೊನ್ನೆ ಸುತ್ತಿದ್ರು. ವೇಗಿಗಳಾದ ಎಸ್. ಅರವಿಂದ್ 4, ಕೆ. ಗೌತಮ್ 3 ಮತ್ತು ಅಭಿಮನ್ಯು ಮಿಥುನ್ 2 ವಿಕೆಟ್ ಕಬಳಿಸಿದ್ರು. ಮೊದಲ ಇನ್ನಿಂಗ್ಸ್ ಆರಂಬಿಸಿದ ಕರ್ನಾಟಕ ಆರಂಭಿಕರಾದ ಆರ್.ಸಮರ್ಥ್, ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 131ರನ್ಗಳಿಸಿದ್ದು, 41 ರನ್ಗಳ ಮುನ್ನಡೆ ಪಡೆದುಕೊಂಡಿದೆ..
