ಐವರು ಬ್ಯಾಟ್ಸ್ಮನ್ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು.
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 324 ರನ್ ಮುನ್ನಡೆ ಸಾಧಿಸಿದೆ. ಡೆಲ್ಲಿ ತಂಡವನ್ನ 90 ರನ್ಗೆ ಆಲೌಟ್ ಮಾಡಿದ್ದ ಕರ್ನಾಟಕ, ಮೊದಲ ಇನ್ನಿಂಗ್ಸ್ನಲ್ಲಿ 414 ರನ್ಗೆ ಆಲೌಟ್ ಆಗಿ ಭಾರೀ ಮುನ್ನಡೆ ಪಡೆಯಿತು. ಐವರು ಬ್ಯಾಟ್ಸ್ಮನ್ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು. ಹೀಗಾಗಿ ಕರ್ನಾಟಕ ಬೃಹತ್ ಮೊತ್ತ ಕೂಡಿಹಾಕಲು ಸಾಧ್ಯವಾಯ್ತು. ಇನ್ನು ಎರಡು ದಿನದ ಆಟ ಬಾಕಿ ಇರುವುದರಿಂದ ಕರ್ನಾಟಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
