ಪಾಂಡೆ ಸ್ಫೋಟಕ ಆಟವಾಡುತ್ತಾ ಬೌಲರ್'ಗಳನ್ನು ದಂಡಿಸಿದರೆ, ತಾಳ್ಮೆಯ ಆಟವಾಡಿದ ಡಿ. ನಿಶ್ಚಲ್ ಚಂಡುದಾರರ ನೀರಿಳಿಸಿದರು. ಯುಪಿ ನಾಯಕ ಸುರೇಶ್ ರೈನಾ ಎಷ್ಟೆ ತಂತ್ರ ಉಪಯೋಗಿಸಿದರೂ ಇಬ್ಬರು ಆಟಗಾರರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ.
ಕಾನ್ಪುರ(ನ.18): ಉತ್ತರ ಪ್ರದೇಶದ ಬೌಲರ್'ಗಳು ಎಷ್ಟೆ ಪ್ರಯತ್ನ ಪಟ್ಟರೂ ರಾಜ್ಯದ ಆಟಗಾರರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಮನೀಶ್ ಪಾಂಡೆಯ ಭರ್ಜರಿ ದ್ವಿಶತಕ(238) ಹಾಗೂ ಡಿ. ನಿಶ್ಚಲ್'ರ ಅಮೋಘ ಶತಕ(195)ದ ನರೆವಿನಿಂದ ಕರ್ನಾಟಕ ತಂಡ ಉತ್ತರ ಪ್ರದೇಶದ ವಿರುದ್ಧದ ರಣಜಿ ಪಂದ್ಯದಲ್ಲಿ 2ನೇ ದಿನದಾಂತ್ಯಕ್ಕೆ 7 ವಿಕೇಟ್ ನಷ್ಟಕ್ಕೆ ದಾಖಲೆ 642 ರನ್ ಪೇರಿಸಿದ್ದಾರೆ.
ಮೊದಲ ದಿನದಾಟದ ಅಂತ್ಯದಲ್ಲಿ 3/327 ರನ್'ನೊಂದಿಗೆ ಆಟ ಆರಂಭಿಸಿದ ಮನೀಶ್ ಪಾಂಡೆ(63) ಹಾಗೂ ಡಿ. ನಿಶ್ವಲ್(90) ರನ್ನು ಯುಪಿ ಬೌಲರ್'ಗಳು ಕೊನೆಯ 20 ಓವರ್ ಇರುವವರೆಗೂ ಔಟ್ ಮಾಡಲು ಸಾಧ್ಯವಾಗಲೇ ಇಲ್ಲ.
ಪಾಂಡೆ ಸ್ಫೋಟಕ ಆಟವಾಡುತ್ತಾ ಬೌಲರ್'ಗಳನ್ನು ದಂಡಿಸಿದರೆ, ತಾಳ್ಮೆಯ ಆಟವಾಡಿದ ಡಿ. ನಿಶ್ಚಲ್ ಚಂಡುದಾರರ ನೀರಿಳಿಸಿದರು. ಯುಪಿ ನಾಯಕ ಸುರೇಶ್ ರೈನಾ ಎಷ್ಟೆ ತಂತ್ರ ಉಪಯೋಗಿಸಿದರೂ ಇಬ್ಬರು ಆಟಗಾರರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ.
ಭರ್ಜರಿ ದ್ವಿಶತಕ, ಮೊದಲ ಶತಕ
ಸ್ಫೋಟಕ ಆಟಗಾರ ಮನೀಶ್ ಪಾಂಡೆ ಭರ್ಜರಿ ದ್ವಿಶತಕ ಬಾರಿಸಿದರು. 301 ಚಂಡುಗಳಲ್ಲಿ 31 ಸ್ಫೋಟಕ ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸ್'ರ್'ಗಳೊಂದಿಗೆ 238 ಚಚ್ಚಿದರು. ಶಿಸ್ತುಬದ್ಧ ಆಟವಾಡಿದ ಹೊಸ ಪ್ರತಿಭೆ ಡಿ. ನಿಶ್ಚಲ್ ತಮ್ಮ 2ನೇ ಪಂದ್ಯದಲ್ಲಿ 425 ಎಸತೆಗಳಲ್ಲಿ 195 ರನ್ ಬಾರಿಸಿದರು. ನಿಶ್ಚಲ್ ತಾಳ್ಮೆಯ ಆಟದಲ್ಲಿ 23 ಬೌಂಡರಿಗಳಿದ್ದವು. ದ್ವಿಶತಕಕ್ಕೆ 5 ರನ್ ಬಾಕಿಯಿದ್ದಾಗ ದೃವ ಪ್ರತಾಪ್ ಸಿಂಗ್ ಬೌಲಿಂಗ್'ನಲ್ಲಿ ವಿಕೇಟ್ ಕೀಪರ್ ಉಪೇಂದ್ರ ಯಾದವ್'ಗೆ ಕ್ಯಾಚಿದ್ದು ನಿರ್ಗಮಿಸಿದರು.
ಇವರಿಬ್ಬರ 4ನೇ ವಿಕೇಟ್' ಜೊತೆಯಾಟದಲ್ಲಿ 354 ರನ್ ರಾಜ್ಯದ ಖಾತೆಗೆ ಸೇರ್ಪಡೆಯಾಯಿತು. ನಿಶ್ಚಲ್ ಔಟಾದ ಒಂದು ಗಂಟೆಯ ನಂತರ ಮನೀಶ್ ಪಂಡೆ ಕೂಡ ಅಹಮದ್ ಬೌಲಿಂಗ್'ನಲ್ಲಿ ಕೀಪರ್ ಉಪೇಂದ್ರ ಯಾದವ್'ಗೆ ಕ್ಯಾಚಿತ್ತು ನಿರ್ಗಿಮಿಸಿದರು. ಪಾಂಡೆ, ನಿಶ್ಚಲ್ ಪೆವಿಲಿಯನ್'ಗೆ ತೆರಳಿದ ನಂತರ ಬಿನ್ನಿ(25) ಒಂದಷ್ಟು ಹೊತ್ತು ಆಟವಾಡಿದರು.ಶ್ರೇಯಸ್ ಗೋಪಾಲ್ 1 ರನ್'ಗೆ ಔಟಾದರು. ದಿನದಾಟ ಅಂತ್ಯಗೊಂಡಾಗ ಕರ್ನಾಟಕ 180 ಓವರ್'ಗಳಲ್ಲಿ 642 ರನ್ ಪೇರಿಸಿತ್ತು. ಕೀಪರ್ ಸಿ.ಎಂ ಗೌತಮ್ (4 ) ಹಾಗೂ ನಾಯಕ ವಿನಯ್ ಕುಮಾರ್(1) ಕ್ರೀಸ್'ನಲ್ಲಿ ಉಳಿದಿದ್ದರು.
ಸ್ಕೋರ್
ಕರ್ನಾಟಕ 180 ಓವರ್'ಗಳಲ್ಲಿ 642
(ಮನೀಶ್ ಪಾಂಡೆ 238, ಡಿ. ನಿಶ್ಚಲ್ 195, ಮಾಯಾಂಕ್ ಅಗರ್'ವಾಲ್ 90, ಕರುನಾ ನಾಯರ್ 62, ಇಮ್ತಿಯಾಜ್ ಅಹಮದ್ 101/3, ಡಿ.ಪಿ.ಸಿಂಗ್ 108/3)
(ಉತ್ತರಪ್ರದೇಶದ ವಿರುದ್ಧ ಪಂದ್ಯ)
