ಮಹಾರಾಷ್ಟ್ರದ 163 ರನ್'ಗಳ ಮೊದಲ ಇನ್ನಿಂಗ್ಸ್ ಸ್ಕೋರಿಗೆ ಪ್ರತಿಯಾಗಿ ಕರ್ನಾಟಕ ಎರಡನೇ ದಿನಾಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 313 ರನ್ ಕಲೆಹಾಕಿದೆ.

ಮೊಹಾಲಿ(ಡಿ. 08): ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ. ಮಹಾರಾಷ್ಟ್ರದ 163 ರನ್'ಗಳ ಮೊದಲ ಇನ್ನಿಂಗ್ಸ್ ಸ್ಕೋರಿಗೆ ಪ್ರತಿಯಾಗಿ ಕರ್ನಾಟಕ ಎರಡನೇ ದಿನಾಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 313 ರನ್ ಕಲೆಹಾಕಿದೆ. ಈ ಮೂಲಕ 150 ರನ್'ಗಳ ಭರ್ಜರಿ ಮುನ್ನಡೆ ಗಳಿಸಲು ಯಶಸ್ವಿಯಾಗಿದೆ.

ನಿನ್ನೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಕರ್ನಾಟಕ ಇಂದು ರನ್ ಬೇಟೆ ಮುಂದುವರಿಸಿತು. ಆರ್.ಸಮರ್ಥ್, ಪವನ್ ದೇಶಪಾಂಡೆ ಅಮೋಘ ಅರ್ಧಶತಕ ದಾಖಲಿಸಿದರು. ಕೌನೇನ್ ಅಬ್ಬಾಸ್, ಸ್ಟುವರ್ಟ್ ಬಿನ್ನಿ ಮತ್ತು ನಾಯಕ ವಿನಯ್ ಕುಮಾರ್ ಉತ್ತಮ ಆಟವಾಡಿದರು.

ಸ್ಕೋರು ವಿವರ(2ನೇ ದಿನಾಂತ್ಯಕ್ಕೆ):

ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 56 ಓವರ್ 163 ರನ್ ಆಲೌಟ್
(ರೋಹಿತ್ ಮೋಟ್ವಾನಿ 32, ಸ್ವಪ್ನಿಲ್ ಗುಗಲೆ 25 ರನ್ - ಆರ್.ವಿನಯ್ ಕುಮಾರ್ 46/5, ಎಸ್.ಅರವಿಂದ್ 32/2, ಸ್ಟುವರ್ಟ್ ಬಿನ್ನಿ 40/2)

ಕರ್ನಾಟಕ ಮೊದಲ ಇನ್ನಿಂಗ್ಸ್ 101 ಓವರ್ 313/9
(ಪವನ್ ದೇಶಪಾಂಡೆ 70, ಆರ್.ಸಮರ್ಥ್ 64, ಸ್ಟುವರ್ಟ್ ಬಿನ್ನಿ 46, ಕೌನೇನ್ ಅಬ್ಬಾಸ್ 41, ಆರ್.ವಿನಯ್ ಕುಮಾರ್ ಅಜೇಯ 36, ಸಿಎಂ ಗೌತಮ್ 26 ರನ್ - ಅನುಪಮ್ ಸಂಕ್ಲೇಚಾ 69/3, ಮೊಹ್ಸಿನ್ ಸಯ್ಯದ್ 42/2, ಪ್ರದೀಪ್ ಡಾದೆ 80/2)