ಮೂರನೆಯವರಾಗಿ ಕ್ರೀಸ್'ಗೆ ಆಗಮಿಸಿದ ಕರುಣಾ ನಾಯರ್ ಕೂಡ ನಿಶ್ಚಲ್'ಗೆ ಉತ್ತಮ ಜೊತೆ ನೀಡಿ 123 ಎಸತಗಳಲ್ಲಿ  8 ಬೌಂಡರಿಗಳೊಂದಿಗೆ 62 ಹೊಡೆದರು.

ಕಾನ್ಪುರ(ನ.17): ಕರ್ನಾಟಕ ತಂಡ ಎ ಗ್ರೂಪ್'ನ 4ನೇ ರಣಜಿ ಪಂದ್ಯದಲ್ಲಿ ಮೊದಲ ದಿನವಾದ ಇಂದು ಉತ್ತರ ಪ್ರದೇಶದ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.

ನಾಲ್ವರು ಅರ್ಧ ಶತಕದೊಂದಿಗೆ ರಾಜ್ಯ ತಂಡ 90 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 327 ರನ್ ಪೇರಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಬ್ಯಾಟಿಂಗ್ ಆಯ್ದುಕೊಂಡರು.

ರವಿಕುಮಾರ್ ಸಮರ್ಥ್ ಹಾಗೂ ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ ಪ್ರಾರಂಭಿಕ ಆಟಗಾರರಾಗಿ ಬ್ಯಾಟಿಂಗ್ ಆರಂಭಿಸಿದರು. 14 ಓವರ್'ನ ಮೊದಲ ಎಸೆತದಲ್ಲಿ ಆರ್. ಸಮರ್ಥ್(16) ತಂಡದ ಮೊತ್ತ 66 ರನ್'ಗಳಾಗಿದ್ದಾಗ ಪ್ರತಾಪ್ ಸಿಂಗ್ ಬೌಲಿಂಗ್'ನಲ್ಲಿ ವಿಕೇಟ್ ಕೀಪರ್ ಉಪೇಂದ್ರ ಯಾದವ್'ಗೆ ಕ್ಯಾಚಿತ್ತು ನಿರ್ಗಮಿಸಿದರು.

ಸ್ಫೋಟಕ ಆಟವಾಡಿದ ಮಾಯಾಂಕ್

ನಂತರ ಕೆ.ಎಲ್.ರಾಹುಲ್ ಬದಲಿಗೆ ಸ್ಥಾನ ಪಡೆದಿದ್ದ ಡಿ.ನಿಶ್ಚಲ್ ಮಾಯಂಗ್ ಅವರೊಂದಿಗೆ ಆಟ ಆರಂಭಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 2ನೇ ವಿಕೇಟ್ ನಷ್ಟಕ್ಕೆ 121 ರನ್ ಬಾರಿಸಿದರು. ಆಕಾಶ್'ದೀಪ್ ಬೌಲಿಂಗ್'ನಲ್ಲಿ ಮಾಯಾಂಕ್ ಔಟಾದಾಗ 73 ಎಸೆತಗಳ 90 ರನ್'ಗಳ ಖಾತೆಯಲ್ಲಿ ಭರ್ಜರಿ 16 ಬೌಂಡರಿಗಳಿದ್ದವು. ಮೂರನೆಯವರಾಗಿ ಕ್ರೀಸ್'ಗೆ ಆಗಮಿಸಿದ ಕರುಣಾ ನಾಯರ್ ಕೂಡ ನಿಶ್ಚಲ್'ಗೆ ಉತ್ತಮ ಜೊತೆ ನೀಡಿ 123 ಎಸತಗಳಲ್ಲಿ 8 ಬೌಂಡರಿಗಳೊಂದಿಗೆ 62 ಹೊಡೆದರು.

ನಾಲ್ವರು ಅರ್ಧ ಶತಕ

ನಾಯರ್ ಔಟಾದ ನಂತರ ಆಗಮಿಸಿದ ಮನೀಶ್ ಪಾಂಡೆ ನಿಶ್ಚಲ್'ರೊಂದಿಗೆ ಮುರಿಯದ 4ನೇ ವಿಕೇಟ್ ನಷ್ಟಕ್ಕೆ 89 ರನ್ ಕಲೆಹಾಕಿದರು. ಪಾಂಡೆ 79 ಎಸತೆಗಳಲ್ಲಿ 10 ಬೌಂಡರಿ 1 ಸಿಕ್ಸ್'ರ್'ನೊಂದಿಗೆ ಅಜೇಯರಾಗಿ 63 ರನ್ ಪೇರಿಸಿದರೆ, ನಿಶ್ಚಲ್ ಸಮಾಧಾನಕರ ಆಟವಾಡಿ 221 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 90 ರನ್'ನೊಂದಿಗೆ ಅಜೇಯರಾಗಿ ಉಳಿದರು. ಕರ್ನಾಟಕದ ಪರ ಮಾಯಾಂಕ್, ನಿಶ್ಚಲ್, ನಾಯರ್ ಹಾಗೂ ಪಾಂಡೆ ಅರ್ಧ ಶತಕ ಗಳಿಸಿದರು. ಉತ್ತರ ಪ್ರದೇಶದ ಪರ ದಿನವಿಡಿ ಒಟ್ಟು 8 ಮಂದಿ ಬೌಲಿಂಗ್ ಮಾಡಿದರೂ ಕೇವಲ 3 ವಿಕೇಟ್ ಪಡೆಯಲಷ್ಟೆ ಸಾಧ್ಯವಾಯಿತು. ದೃವ ಪ್ರತಾಪ್ ಸಿಂಗ್ 74/2 ಹಾಗೂ ಆಕಾಶ್'ದೀಪ್ 27/1 ವಿಕೇಟ್ ಗಳಿಸಿ ಮೊದಲ ದಿನದ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಕರ್ನಾಟಕ 90 ಓವರ್'ಗಳಲ್ಲಿ 327/3

(ಮಾಯಾಂಕ್ ಅಗರ್'ವಾಲ್ 90, ಡಿ. ನಿಶ್ಚಲ್ ಅಜೇಯ 90, ಕರುಣಾ ನಾಯರ್ 62, ಮನೀಶ್ ಪಾಂಡೆ ಅಜೇಯ 63,ಡಿ. ಪ್ರತಾಪ್ ಸಿಂಗ್ 74/2)

(ಉತ್ತರ ಪ್ರದೇಶ ವಿರುದ್ಧದ ಪಂದ್ಯ)