ದೆಹಲಿಯಲ್ಲಿ ರಾಥೋಡ್‌ರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯದಲ್ಲಿ ಕ್ರೀಡಾಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ‘ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣದ ಸಮೀಪ ವಿದ್ಯಾನಗರದಲ್ಲಿ ಕ್ರೀಡಾ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ₹ 70 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡಬೇಕು’ ಎಂದು ಪರಮೇಶ್ವರ್ ಕೇಳಿಕೊಂಡರು.  

ನವದೆಹಲಿ[ಸೆ.20]: ರಾಜ್ಯದಲ್ಲಿ ನೂತನ ಕ್ರೀಡಾಸಂಕೀರ್ಣ ನಿರ್ಮಾಣ ಮತ್ತು ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ₹ 70 ಕೋಟಿ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬಳಿ ಮನವಿ ಮಾಡಿದ್ದಾರೆ. 

ಬುಧವಾರ ದೆಹಲಿಯಲ್ಲಿ ರಾಥೋಡ್‌ರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯದಲ್ಲಿ ಕ್ರೀಡಾಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ‘ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣದ ಸಮೀಪ ವಿದ್ಯಾನಗರದಲ್ಲಿ ಕ್ರೀಡಾ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ₹ 70 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡಬೇಕು’ ಎಂದು ಪರಮೇಶ್ವರ್ ಕೇಳಿಕೊಂಡರು. 

Scroll to load tweet…

ರಾಜ್ಯ ಕ್ರೀಡಾ ಸಚಿವರ ಮನವಿಗೆ ರಾಥೋಡ್ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.