ಬೆಂಗಳೂರು[ಜು.23]: ಕರ್ನಾಟಕದ ಆಟಗಾರ ರಾಬಿನ್‌ ಉತ್ತಪ್ಪ, ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ತೊರೆದು ಕೇರಳ ತಂಡದಲ್ಲಿ ಆಡಲಿದ್ದಾರೆ. ಈ ಸಂಬಂಧ ರಾಬಿನ್‌ ಕೇರಳ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದರೆ. 

ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ಕಳೆದ 2 ರಣಜಿ ಋುತುವಿನಲ್ಲಿ ರಾಬಿನ್‌ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಡಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ರಾಬಿನ್‌ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 

2002-03ನೇ ಸಾಲಿನಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಬಿನ್‌ 2016-17 ರ ವರೆಗೆ ಒಟ್ಟು 13 ವರ್ಷ ರಾಜ್ಯ ತಂಡದ ಪರ ಆಡಿದ್ದರು. 2009ರ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಬಿನ್‌ ನಾಯಕತ್ವದಲ್ಲಿ ಕರ್ನಾಟಕ ಫೈನಲ್‌ ತಲುಪಿತ್ತು. 33 ವರ್ಷ ವಯಸ್ಸಿನ ರಾಬಿನ್‌ ಭಾರತ ಪರ 43 ಏಕದಿನ, 13 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.