ಮೆಲ್ಬರ್ನ್[ಡಿ.25]: ಭಾರತ-ಆಸ್ಟ್ರೇಲಿಯಾ ನಡುವೆ ಬುಧವಾರದಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್’ಗೆ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಕನ್ನಡಿಗ ಮಯಾಂಕ್ ಅಗರ್’ವಾಲ್, ರವೀಂದ್ರ ಜಡೇಜಾ ತಂಡ ಕೂಡಿಕೊಂಡಿದ್ದಾರೆ.

ಮೊದಲೆರಡು ಟೆಸ್ಟ್’ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಮುರುಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಆರಂಭಿಕರಾಗಿ ಇದೀಗ ಮಯಾಂಕ್ ಅಗರ್’ವಾಲ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲಿದ್ದಾರೆ. ಇನ್ನು ಪರ್ತ್ ಟೆಸ್ಟ್’ನಲ್ಲಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದು ಕೈಸುಟ್ಟುಕೊಂಡಿದ್ದ ಟೀಂ ಇಂಡಿಯಾ ಇದೀಗ ಉಮೇಶ್ ಯಾದವ್ ಅವರನ್ನು ಕೈಬಿಟ್ಟು, ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಅವರಿಗೆ ಅವಕಾಶ ಸಿಕ್ಕಿದೆ.

ವಿಜಯ್-ರಾಹುಲ್ ಜೋಡಿ ಕಳೆದ 8 ಇನ್ನಿಂಗ್ಸ್’ಗಳಲ್ಲಿ ಕೇವಲ 95 ರನ್ ಅಷ್ಟೇ ಬಾರಿಸಿತ್ತು. ಇದೀಗ ಮಯಾಂಕ್ ಜತೆಗೆ ಹನುಮ ವಿಹಾರಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. 
ಇನ್ನು ಮೊದಲ ಟೆಸ್ಟ್ ಬಳಿಕ ಗಾಯಕ್ಕೆ ತುತ್ತಾಗಿರುವ ರವಿಚಂದ್ರನ್ ಅಶ್ವಿನ್ ಇನ್ನೂ ಸುಧಾರಿಸಿಕೊಳ್ಳದ ಹಿನ್ನಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. 

4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಇದೀಗ ಮೆಲ್ಬರ್ನ್ ಟೆಸ್ಟ್ ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ.

ತಂಡ ಹೀಗಿದೆ: