ಕೋಲ್ಕತಾ(ಸೆ.29): ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಪ್ರತೀ ಪಂದ್ಯಕ್ಕೂ ಸಾಂಪ್ರದಾಯಿಕ ಬೆಲ್‌ ಬಾರಿಸುವ ವಾಡಿಕೆ ಇನ್ನು ಮುಂದೆ ಭಾರತದಲ್ಲೂ ಜಾರಿಗೆ ಬರಲಿದೆ.

ಈ ಸಂಪ್ರದಾಯಕ್ಕೆ ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಮುನ್ನುಡಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗ ಇಲ್ಲವೇ ಕ್ರೀಡೆಯನ್ನು ಅತಿಹೆಚ್ಚು ಪ್ರೇಮಿಸುವವರು ಐದು ನಿಮಿಷಗಳ ಕಾಲ ಬೆಲ್‌ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡುವ ಪದ್ಧತಿಗೆ 2007ರಿಂದ ನಾಂದಿ ಹಾಡಲಾಗಿತ್ತು.

ಈಡನ್‌ ಮೈದಾನದಲ್ಲಿನ ಗಡಿಯಾರದ ಪಕ್ಕದಲ್ಲೇ ಬೆಳ್ಳಿ ಲೇಪಿತ ಗಂಟೆಯೊಂದನ್ನು ತೂಗುಹಾಕಲಾಗಿದ್ದು, ಕಪಿಲ್‌ ಬೆಲ್‌ ಬಾರಿಸುವುದರೊಂದಿಗೆ ಭಾರತ-ಕಿವೀಸ್‌ ನಡುವಣದ ಎರಡನೇ ಟೆಸ್ಟ್‌ಗೆ ಚಾಲನೆ ನೀಡಲಿದ್ದಾರೆ.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕೋರಿಕೆಯ ಮೇರೆಗೆ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಈಡನ್ ಗಾರ್ಡನ್'ನಲ್ಲಿ ಬೆಲ್ ಬಾರಿಸಲಿದ್ದಾರೆ.