ಮುಂಬೈ(ಸೆ.21): ನೀವು ಹಿಂದೂಸ್ಥಾನಿಗಳಾಗಿದ್ದರೆ ಪಾಕಿಸ್ತಾನದ ಕುರಿತಂತೆ ಪ್ರಶ್ನೆಗಳನ್ನು ಕೇಳುವುದಿಲ್ಲ, ಹಾಗೆಯೇ ಈ ಸಂದರ್ಭದಲ್ಲಿ ಉಚಿತವೂ ಅಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಕ್ಟೋಬರ್ 7ರಿಂದ ಗುಜರಾತ್'ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಕಬಡ್ಡಿ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಕಪಿಲ್ ದೇವ್, ಪಾಕ್ ತಂಡವನ್ನು ವಿಶ್ವಕಪ್ ಟೂರ್ನಿಗೆ ಆಹ್ವಾನಿಸದಿರುವ ಕುರಿತಂತೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದಾರೆ.

ಭಾರತ ಕಬಡ್ಡಿ ತಂಡದ ಜರ್ಸಿ ಅನಾವರಣಗೊಳಿಸಿ ಮಾತನಾಡಿದ ಹರಿಯಾಣದ ಹರಿಕೇನ್, ಇಂತಹ ವಿಚಾರಗಳನ್ನು ನಿರ್ಧರಿಸಲು ಸರ್ಕಾರದ ಪಾಳಿಗೆ ಬಿಡಬೇಕು. ದೇಶವನ್ನು ಪ್ರತಿನಿಧಿಸುವ ಒಬ್ಬ ಆಟಗಾರ ದೇಶಕ್ಕಾಗಿ ಕೊಳಕ್ಕೆ ಜಿಗಿ ಎಂದರೆ ತಕ್ಷಣವೇ ಜಿಗಿಯುವಂತಿರಬೇಕು ಎಂದಿದ್ದಾರೆ.

ಭಾರತ ಸೇರಿದಂತೆ ಒಟ್ಟು 12 ದೇಶಗಳು ವಿಶ್ವಕಪ್ ಕಬಡ್ಡಿಯಲ್ಲಿ ಭಾಗವಹಿಸುತ್ತಿದ್ದು, ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಈ ಹಿಂದೆ 2004 ಹಾಗೂ 2007ರಲ್ಲಿ ವಿಶ್ವಕಪ್ ಕಬಡ್ಡಿ ನಡೆದಿತ್ತು. ಎರಡು ಭಾರಿಯೂ ಭಾರತ ತಂಡ ಚಾಂಪಿಯನ್ ಆಗಿತ್ತು.