ಕಾನ್ಪುರ(ಸೆ.20): ಇದೇ ಗುರುವಾರದಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧ ನಡೆಯುವ ಭಾರತದ 500ನೇ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಕ್ಕಾಗಿ ಶ್ರೇಷ್ಠ ಟೆಸ್ಟ್ ಟ್ರ್ಯಾಕ್ ಪಿಚ್‌ನ್ನು ರೂಪಿಸಲು ಸ್ಥಳೀಯ ಕ್ಯೂರೇಟರ್‌ಗೆ ಸೂಚಿಸಲಾಗಿದೆ.
ಕಾನ್ಪುರ ಟ್ರಾಕ್ ಒಣ ಮಣ್ಣಿನಿಂದ ಕೂಡಿದ್ದು, ಬಿರುಕು ಬಿಟ್ಟಿದೆ. ಇಲ್ಲಿನ ಮೈದಾನದ ಸಿಬ್ಬಂದಿಗೆ ಪಿಚ್ ವೇಗವಾಗಿ ತಿರುವು ಪಡೆಯಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಕಳೆದ ಬಾರಿ ನಾಗ್ಪುರ ಮತ್ತು ಮೊಹಾಲಿ ಪಿಚ್‌ಗಳು ಹೆಚ್ಚಿನ ತಿರುವು ಪಡೆದು ಆತಿಥೇಯ ಭಾರತ ತಂಡಕ್ಕೆ ವರದಾನವಾಗಿತ್ತು. ಅಲ್ಲದೇ ಆ ಪಂದ್ಯಗಳು ಕೇವಲ 3 ದಿನಗಳಲ್ಲಿ ಮುಕ್ತಾಯ ಕಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಕಳೆದ ಪಂದ್ಯಗಳಂತೆ ಕೇವಲ ಮೂರು ದಿನಗಳಲ್ಲಿ ಮುಕ್ತಾಯವಾಗದಂತೆ ಸಂಪೂರ್ಣ ಐದು ದಿನಗಳ ಕಾಲ ಪಂದ್ಯ ನಡೆಯುವಂತೆ ಮಾಡಲು ತೀರ್ಮಾನಿಸಿದೆ.
ಹಸಿರಿನಿಂದ ಕೂಡಿದ ಈ ಪಿಚ್'ನಲ್ಲಿ ಮೊದಲ ಎರಡು ದಿನ ಬ್ಯಾಟಿಂಗ್'ಗೆ ಅನುಕೂಲಕರವಾಗಿದ್ದರೂ ನಂತರದ ದಿನಗಳಲ್ಲಿ ಬೌಲರ್'ಗಳಿಗೆ ಅನುಕೂಲಕರವಾಗಿ ವರ್ತಿಸುವುದನ್ನು ಕಳೆದ ಹಲವಾರು ಪಂದ್ಯಗಳಲ್ಲಿ ನೋಡಿದ್ದೇವೆ.
