ಆರ್'ಸಿಬಿ ಮಾತ್ರ ಬೇಡವಾದ ಕನ್ನಡಿಗರಿಗೆ ಈ ಬಾರಿ ಬಂಪರ್ ಬೆಲೆ

First Published 27, Jan 2018, 12:52 PM IST
Kannada players get Highest Price at ipl 2018
Highlights

ಟೆಸ್ಟ್ ತ್ರಿಶತಕ ವೀರ ಕರುಣ್ ನಾಯರ್  ಪಂಜಾಬ್ ತಂಡಕ್ಕೆ 5.50 ಕೋಟಿಗೆ ಮಾರಾಟವಾಗಿದ್ದಾರೆ. ಇಲ್ಲಿಯವರೆಗೂ ಆತಿಥ್ಯ ತಂಡ ಆರ್'ಸಿಬಿ ಒಬ್ಬ ಕರ್ನಾಟಕದ ಆಟಗಾರರನ್ನು ಖರೀದಿಸಿಲ್ಲ.

ಬೆಂಗಳೂರು(ಜ.27): ಕರ್ನಾಟಕದ ಆಟಗಾರರು 10ನೇ ಐಪಿಎಲ್ ಹರಾಜಿನಲ್ಲಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ. ಅತೀ ಹೆಚ್ಚು ಬೆಲೆಗೆ ಹರಾಜಾದ ಆಟಗಾರ ಕೆ.ಎಲ್.ರಾಹುಲ್. ಪಂಜಾಬ್ ಕಿಂಗ್ಸ್ ಇಲವೆನ್ ತಂಡ 11 ಕೋಟಿ ರೂ.ಗೆ ರಾಹುಲ್ ಅವರನ್ನು ಖರೀದಿಸಿದೆ.

ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದು, 11 ಕೋಟಿ ಕೊಟ್ಟು ಅವರನ್ನು ಖರೀದಿಸಲಾಗಿದೆ. ಟೆಸ್ಟ್ ತ್ರಿಶತಕ ವೀರ ಕರುಣ್ ನಾಯರ್  ಪಂಜಾಬ್ ತಂಡಕ್ಕೆ 5.50 ಕೋಟಿಗೆ ಮಾರಾಟವಾಗಿದ್ದಾರೆ. ಇಲ್ಲಿಯವರೆಗೂ ಆತಿಥ್ಯ ತಂಡ ಆರ್'ಸಿಬಿ ಒಬ್ಬ ಕರ್ನಾಟಕದ ಆಟಗಾರರನ್ನು ಖರೀದಿಸಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ ಆರ್'ಸಿಬಿ ಬ್ರೆಂಡನ್ ಮೆಕಲಮ್ ಅವರನ್ನು ಮಾತ್ರ 3.60 ಕೋಟಿಗೆ ಖರೀದಿಸಿದೆ. ಸತತ ವೈಫಲ್ಯ ಕಾಣುತ್ತಿರುವ ಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್ ಗೇಲ್ ಅವರನ್ನು ಯಾವೊಂದು ತಂಡವೂ ಇಲ್ಲಿಯವರೆಗೂ ಖರೀದಿಸಿಲ್ಲ.

ಸ್ಟೋಕ್ಸ್'ಗೆ ಹೆಚ್ಚು ಕೋಟಿ

ಭೋಜನ ವಿರಾಮದವರೆಗೂ ಇಂಗ್ಲೆಂಡಿನ ಆಲ್'ರೌಂಡರ್ ಬೆನ್ ಸ್ಟೋಕ್ಸ್ ಹೆಚ್ಚು ಮಾರಾಟವಾದ ಆಟಗಾರರಾಗಿದ್ದು.ರಾಜಸ್ಥಾನ್ ರಾಯಲ್ಸ್ 12.50 ಕೋಟಿಗೆ ಖರೀದಿಸಿದೆ. ಇನ್ನುಳಿದಂತೆ  ಪಂಜಾಬ್ ಪರ ಅಶ್ವಿನ್ 7.60, ಪೊಲ್ಲಾರ್ಡ್ 5.40 ಕೋಟಿ, ಹೈದರಾಬಾದ್'ಗೆ ಶಿಖರ್ ಧವನ್ 5.20,ರಾಯಲ್ಸ್'ಗೆ ರಹಾನೆ 4 ಕೋಟಿ, ಕೋಲ್ಕತ್ತಾಗೆ ಸ್ಟಾರ್ಕ್ 9.4 ಕೋಟಿ, ಡೆಲ್ಲಿಗೆ ಮ್ಯಾಕ್ಸ್'ವೆಲ್  9 ಕೋಟಿಗೆ ಮಾರಾಟವಾಗಿದ್ದಾರೆ.

loader