ಅಹಮದಾಬಾದ್(ಅ.2): ವಿಶ್ವಕಪ್‌ ಕಬಡ್ಡಿ ಕೂಟಕ್ಕೂ ಮುನ್ನ ಕನ್ನಡಿಗರ ಮಟ್ಟಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ವಿದೇಶಿ ಕಬಡ್ಡಿ ತಂಡಕ್ಕೆ ಕನ್ನಡಿಗರಾದ ಬಿ.ಸಿ ರಮೇಶ್​ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಕಳೆದ 4 ದಿನಗಳಿಂದ ಅರ್ಜೆಂಟೀನಾ ತಂಡಕ್ಕೆ ಬಿ.ಸಿ ರಮೇಶ್ ತರಬೇತಿಯನ್ನು ಆರಂಭಿಸಿದ್ದಾರೆ. ಈ ವಿಷಯ ಅಧಿಕೃತವಾಗಿ ಇನ್ನೂ ಪ್ರಕಟವಾಗಿಲ್ಲ. ಆದರೆ ರಾಜ್ಯದ ಹೆಮ್ಮೆಯ ಅಂತಾರಾಷ್ಟ್ರೀಯ ಕಬಡ್ಡಿ ಪಟು ಬಿ.ಸಿ.ರಮೇಶ್‌ ತಮ್ಮ ಆಯ್ಕೆಯನ್ನು ಸುವರ್ಣ ನ್ಯೂಸ್​ಗೆ ಖಚಿತಪಡಿಸಿದ್ದಾರೆ.