ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಕಮ್ರಾನ್‌ಗೆ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ನೀಡಿ, ಪಿಸಿಬಿ ನಗೆಪಾಟಲಿಗೆ ಗುರಿಯಾಗಿದೆ. ಕಮ್ರಾನ್ ಗೈರಾದ ಕಾರಣ, ಅವರ ಬದಲಿಗೆ ಮತ್ತೊಬ್ಬ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದರು.
ನವದೆಹಲಿ[ಆ.11]: ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್‌ಗೆ ವರ್ಷದ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯನ್ನು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಕಮ್ರಾನ್‌ಗೆ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ನೀಡಿ, ಪಿಸಿಬಿ ನಗೆಪಾಟಲಿಗೆ ಗುರಿಯಾಗಿದೆ. ಕಮ್ರಾನ್ ಗೈರಾದ ಕಾರಣ, ಅವರ ಬದಲಿಗೆ ಮತ್ತೊಬ್ಬ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದರು.
ಇದನ್ನೇ ಗುರಿಯಾಗಿಸಿಕೊಂಡಿರುವ ಅಭಿಮಾನಿಗಳು, ‘ಕಮ್ರಾನ್ ತಮಗೆ ನೀಡುವ ಪ್ರಶಸ್ತಿಯನ್ನೂ ಕೈಚೆಲ್ಲಲಿದ್ದಾರೆ ಎಂದು ಪಿಸಿಬಿ ಬೇರೆಯೊಬ್ಬರ ಮೂಲಕ ಪ್ರಶಸ್ತಿ ಕೊಡಿಸಲು ನಿರ್ಧರಿಸಿದೆ’ ಎಂದು ಕಾಲೆಳೆದಿದ್ದಾರೆ.