ಸೆಪ್ಟೆಂಬರ್ 22, 2016ರಿಂದ ಅಸಭ್ಯ ವರ್ತನೆ ತೋರಿದ ಆಟಗಾರರಿಗೆ ಡಿಮೆರಿಟ್ ನೀಡುವ ಕ್ರಮವನ್ನು ಐಸಿಸಿ ಜಾರಿಗೆ ತಂದಿದೆ.
ಲಂಡನ್(ಜು.08): ಮೈದಾನದಲ್ಲೇ ಅಸಭ್ಯ ವರ್ತನೆ ತೋರಿದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ಅವರನ್ನು ಒಂದು ಟೆಸ್ಟ್ ಪಂದ್ಯದ ಮಟ್ಟಿಗೆ ಅಮಾನತು ಮಾಡಲಾಗಿದೆ. ಹಾಗಾಗಿ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ರಬಾಡ ಇಲ್ಲದೇ ಮೈದಾನಕ್ಕಿಳಿಯಲಿದೆ.
ಬೆನ್ ಸ್ಟೋಕ್ಸ್'ಗೆ ಅಶ್ಲೀಲ ಪದಪ್ರಯೋಗಿಸುವ ಮೂಲಕ ರಬಾಡ ಐಸಿಸಿ ನಿಯಮ ಕಲಂ 2.1.7 ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಒಂದು ಟೆಸ್ಟ್ ಪಂದ್ಯದ ಮಟ್ಟಿಗೆ ಅಮಾನತು ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಇದೇ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲೂ ಅಸಭ್ಯ ವರ್ತನೆ ತೋರಿದ್ದ ಹಿನ್ನೆಲೆಯಲ್ಲಿ ರಬಾಡಗೆ ಪಂದ್ಯದ ಸಂಭಾವನೆಯ ಶೇ.50% ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.
ಸೆಪ್ಟೆಂಬರ್ 22, 2016ರಿಂದ ಅಸಭ್ಯ ವರ್ತನೆ ತೋರಿದ ಆಟಗಾರರಿಗೆ ಡಿಮೆರಿಟ್ ನೀಡುವ ಕ್ರಮವನ್ನು ಐಸಿಸಿ ಜಾರಿಗೆ ತಂದಿದೆ.
