ಕ್ರಿಕೆಟ್ ವಿಶ್ವಕಪ್ ಗೆದ್ಧವರಿಗೆ ಕೋಟಿ-ಕೋಟಿ ಬಹುಮಾನವನ್ನು ನೀಡಲಾಗುತ್ತಿದ್ದೆ ಆದರೆ ಕಬ್ಬಡಿ ವಿಶ್ವಕಪ್ ಗೆದ್ಧವರಿಗೆ ಕನಿಷ್ಠ ಪಕ್ಷ ಒಂದು ಅಭಿನಂದನೆಯೂ ಇಲ್ಲವಲ್ಲ ಎಂದು ಆಟಗಾರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ(ಅ.29): ವಿಶ್ವಕಪ್ ಗೆದ್ದ ಭಾರತದ ಕಬಡ್ಡಿ ತಂಡಕ್ಕೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಂದ್ರೆ ಆಟಗಾರರಿಗೆ ತಲಾ 67 ಸಾವಿರ ರೂ ಸಿಕ್ಕಿದೆ. ಕೇಂದ್ರ ಸರ್ಕಾರ ಟೀಂ ಇಂಡಿಯಾಗೆ ಯಾವುದೇ ನಗದು ಬಹುಮಾನ ಪ್ರಕಟಿಸಿಲ್ಲ.
ಇದರಿಂದ ಕಬ್ಬಡಿ ಆಟಗಾರು ಬೇಸರ ಗೊಂಡಿದ್ದು, ಕ್ರಿಕೆಟ್ ವಿಶ್ವಕಪ್ ಗೆದ್ಧವರಿಗೆ ಕೋಟಿ-ಕೋಟಿ ಬಹುಮಾನವನ್ನು ನೀಡಲಾಗುತ್ತಿದ್ದೆ ಆದರೆ ಕಬ್ಬಡಿ ವಿಶ್ವಕಪ್ ಗೆದ್ಧವರಿಗೆ ಕನಿಷ್ಠ ಪಕ್ಷ ಒಂದು ಅಭಿನಂದನೆಯೂ ಇಲ್ಲವಲ್ಲ ಎಂದು ಆಟಗಾರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ವಿಶ್ವಕಪ್ ಕಬಡ್ಡಿ ಗೆದ್ದೊಡನೆ ಕಬಡ್ಡಿಯನ್ನು ಒಲಿಂಪಿಕ್ಸ್ ನಲ್ಲಿ ಸೇರಿಸಬೇಕು ಎಂದ ಸರ್ಕಾರದ ಪ್ರಮುಖರು ಗೆದ್ದ ಆಟಗಾರರಿಗೆ ಕಾಂಗ್ರಾಟ್ಸ್ ನ್ನೂ ಸರಿಯಾಗಿ ಹೇಳಿಲ್ಲ ಎಂದು ವಿಶ್ವಕಪ್ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಜಯ್ ಠಾಕೂರ್ ಹೇಳಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ರಜತ ಪದಕ ಗೆದ್ದ ಸಿಂಧು ಅವರಿಗೆ ಬಹುಮಾನದ ರೂಪದಲ್ಲಿ ಸುಮಾರು 13 ಕೋಟಿ ಸಿಕ್ಕಿದೆ. 2011ರಲ್ಲಿ ವಿಶ್ವಕಪ್ಗೆದ್ದ ಟೀಂ ಇಂಡಿಯಾದ ಒಬ್ಬೊಬ್ಬ ಕ್ರಿಕೆಟಿಗನಿಗೆ 1.3 ಕೋಟಿ ರೂ ಬಹುಮಾನ ಸಿಕ್ಕಿತ್ತು. ಕಬಡ್ಡಿ ಆಟಗಾರರತ್ತ ಯಾಕೆ ಈ ಪರಿ ನಿರ್ಲಕ್ಷ್ಯ ಎಂದು ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.
