ನವದೆಹಲಿ​​(ಸೆ.15): ಭಾರತ ಈ ವರ್ಷ 2ನೇ ವಿಶ್ವಕಪ್​​ ಟೂರ್ನಿಯೊಂದನ್ನು ಆಯೋಜನೆ ಮಾಡ್ತಿದೆ. ಈಗಾಗಲೇ ಟಿ20 ವಿಶ್ವಕಪ್​ ಆಯೋಜನೆ ಮಾಡಿದ್ದ ಭಾರತ, ಇದೀಗ ಕಬಡ್ಡಿ ವಿಶ್ವಕಪ್​​ ಆಯೋಜನೆಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ. 

ನವದೆಹಲಿಯಲ್ಲಿ ವಿಶ್ವಕಪ್​​ ಕಬಡ್ಡಿ ಟೂರ್ನಿಯ ಲಾಂಚನ ಹಾಗೂ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಿಂಹದ ತಲೆಯನ್ನು ಹೊಂದಿರುವ ಲಾಂಚನದಲ್ಲಿ ಆಯೋಜನೆ ಮಾಡ್ತಿರೋ ಅಹಮದಾಬಾದ್​​ ಹೆಸರನ್ನು ಸೇರಿಸಲಾಗಿದೆ.

ಟೂರ್ನಿ ಅಕ್ಟೋಬರ್​​​ 7 ರಿಂದ 22ರ ವೆರಗೂ ನಡೆಯಲಿದೆ. ಭಾರತ ಲೀಗ್​​ ಹಂತದಲ್ಲಿ 5 ಪಂದ್ಯಗಳನ್ನು ಆಡಲಿದ್ದು, ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಕೋರಿಯಾವನ್ನು ಎದುರಿಸಲಿದೆ. ಆ ಬಳಿಕ ಆಸ್ಟ್ರೇಲಿಯಾ, ಬಾಂಗ್ಲಾ, ಅರ್ಜಿಂಟೀನಾ ಹಾಗೂ ಇಂಗ್ಲೆಂಡ್​​ ತಂಡವನ್ನು ಎದುರಿಸಲಿದೆ.