ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ
2006ರಲ್ಲಿ ಅನೂಪ್ ಅಂತರಾಷ್ಟ್ರೀಯ ಕಬಡ್ಡಿಗೆ ಪದಾರ್ಪಣೆ ಮಾಡಿದ್ದ ಅವರ, 2014ರ ಏಷ್ಯನ್ ಗೇಮ್ಸ್, 2016ರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ನಾಯಕರಾಗಿದ್ದರು.
ಪಂಚಕುಲಾ[ಡಿ.20] ದಿಗ್ಗಜ ಆಟಗಾರ ಅನೂಪ್ ಕುಮಾರ್, ಕಬಡ್ಡಿಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 15 ವರ್ಷಗಳ ಕಬಡ್ಡಿ ವೃತ್ತಿಜೀವನಕ್ಕೆ ಗುಡ್’ಬೈ ಹೇಳಿದ್ದಾರೆ. ಬುಧವಾರ ಪಂಚಕುಲಾದಲ್ಲಿ ತಮ್ಮ ನಿವೃತ್ತಿ ವಿಚಾರ ಬಹಿರಂಗಪಡಿಸಿದ್ದಾರೆ. 2010, 2014ರಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಅನೂಪ್ ಇದ್ದರು.
Bonus Ka Badshah 🙌
— ProKabaddi (@ProKabaddi) December 19, 2018
Captain Cool 😎@IamAnupK - Game se retired, dilon se nahi! ❤️ pic.twitter.com/ovJ5V8DbZQ
2006ರಲ್ಲಿ ಅನೂಪ್ ಅಂತರಾಷ್ಟ್ರೀಯ ಕಬಡ್ಡಿಗೆ ಪದಾರ್ಪಣೆ ಮಾಡಿದ್ದ ಅವರ, 2014ರ ಏಷ್ಯನ್ ಗೇಮ್ಸ್, 2016ರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಅನೂಪ್‌ರನ್ನು 2018ರ ಏಷ್ಯನ್ ಗೇಮ್ಸ್ ತಂಡದಿಂದ ಹೊರಗಿಡಲಾಗಿತ್ತು. ಮೊದಲ ಆವೃತ್ತಿಯಿಂದಲೂ ಯು ಮುಂಬಾ ಪರ ಪ್ರೊ ಕಬಡ್ಡಿಯಲ್ಲಿ ಆಡುತ್ತಿದ್ದ ಅನೂಪ್, 2ನೇ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
05ನೇ ಆವೃತ್ತಿಯ ವೇಳೆ ಯು ಮುಂಬಾ ತಂಡವನ್ನು ಪ್ರತಿನಿಧಿಸುತ್ತಿದ್ದ ಅನೂಪ್ ಕುಮಾರ್ ತಮ್ಮ ವೈಯುಕ್ತಿಕ ಹಾಗೂ ವೃತ್ತಿಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.
ಫಿಟ್ನೆಸ್ ಹಾಗೂ ಲಯದ ಸಮಸ್ಯೆಯಿಂದಾಗಿ ಈ ವರ್ಷ ಯು ಮುಂಬಾ ಅವರನ್ನು ಕೈ ಬಿಟ್ಟಿತ್ತು. ಕೇವಲ 30 ಲಕ್ಷ ರು.ಗೆ ಜೈಪುರ ತಂಡ ಖರೀದಿಸಿತ್ತು. ವೈಯಕ್ತಿಕ ಕಾರಣಗಳಿಂದ ಅನೂಪ್ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಹೆಚ್ಚಿನ ಪಂದ್ಯ ಆಡಿರಲಿಲ್ಲ. 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಅನೂಪ್, ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.