Asianet Suvarna News Asianet Suvarna News

ಪಂದ್ಯದ ವೇಳೆ ಗಾಯ: ಕಬಡ್ಡಿ ಆಟಗಾರ ಸಾವು!

ಕಬಡ್ಡಿ ಟೂರ್ನಿಯೊಂದರಲ್ಲಿ ಗಾಯಗೊಂಡು ಕೊನೆಯುಸಿರೆಳೆದ ಆಟಗಾರ
ಛತ್ತೀಸ್‌ಗಢದ 28 ವರ್ಷದ ಕಬಡ್ಡಿ ಪಟು ಸಮರು ಕೆರ್ಕೆಟ್ಟಚಿಕಿತ್ಸೆ ಫಲಕಾರಿಯಾಗದೆ ದುರ್ಮರಣ
‘ಛತ್ತೀಸ್‌ಗಢ ಒಲಿಂಪಿಕ್ಸ್‌’ ಎನ್ನುವ ಹೆಸರಿನಲ್ಲಿ ಆಯೋಜಿಸಿದ್ದ ಟೂರ್ನಿ

Kabaddi player dies after injury during match in Chhattisgarh kvn
Author
First Published Nov 18, 2022, 9:44 AM IST

ನವದೆಹಲಿ(ನ.18): ಕಳೆದ ತಿಂಗಳು ಆಟದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಛತ್ತೀಸ್‌ಗಢದ 28 ವರ್ಷದ ಕಬಡ್ಡಿ ಪಟು ಸಮರು ಕೆರ್ಕೆಟ್ಟಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ. ‘ಛತ್ತೀಸ್‌ಗಢ ಒಲಿಂಪಿಕ್ಸ್‌’ ಎನ್ನುವ ಹೆಸರಿನಲ್ಲಿ ಅಲ್ಲಿನ ರಾಜ್ಯ ಸರ್ಕಾರ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸಮರು, ಪಂದ್ಯದ ವೇಳೆ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ರಾಯಗಢದ ಜಿಂದಾಲ್‌ ಆಸ್ಪತ್ರೆಗೆ ಸ್ಥಳಾಂತರಿಸಿ ವೆಂಟಿಲೇರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಪ್ರಯತ್ನಗಳು ಸಮರು ಅವರ ಜೀವ ಉಳಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಒಂದು ತಿಂಗಳಲ್ಲಿ ಈ ಕ್ರೀಡಾಕೂಟದಲ್ಲಿ ಜರುಗಿದ 3ನೇ ಪ್ರಕರಣವಿದು. ಅ.15ರಂದು ಮಹಿಳಾ ಕಬಡ್ಡಿ ಆಟಗಾರ್ತಿಯೊಬ್ಬರು ಸಾವನ್ನಪ್ಪಿದ್ದರು. ಅ.11ರಂದು 32 ವರ್ಷದ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದರು. ಛತ್ತೀಸಗಢ ಸರ್ಕಾರವು ದೇಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅ.6, 2022ರಿಂದ ಜ.6, 2023ರ ವರೆಗೂ ಕ್ರೀಡಾಕೂಟ ಆಯೋಜಿಸಿದೆ.

ಡಿ.13ರಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪ್ಲೇ-ಆಫ್‌

ಹೈದರಾಬಾದ್‌: ಡಿಸೆಂಬರ್‌ 13ರಿಂದ 17ರ ವರೆಗೂ ಮುಂಬೈನಲ್ಲಿ ಪ್ರೊ ಕಬಡ್ಡಿ 9ನೇ ಆವೃತ್ತಿಯ ಪ್ಲೇ-ಆಫ್‌ ಪಂದ್ಯಗಳು ನಡೆಯಲಿವೆ ಎಂದು ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲೀಗ್‌ ಹಂತದ 3ನೇ ಚರಣ ಶುಕ್ರವಾರ ಇಲ್ಲಿ ಆರಂಭಗೊಳ್ಳಲಿದೆ. ಡಿಸೆಂಬರ್ 13ಕ್ಕೆ ಎರಡು ಎಲಿಮಿನೇಟರ್‌ ಪಂದ್ಯಗಳು ನಡೆಯಲಿದ್ದು, ಡಿ.15ರಂದು ಎರಡು ಸೆಮಿಫೈನಲ್‌ ಪಂದ್ಯಗಳು, ಡಿ.17ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಐಎಸ್‌ಎಲ್‌: ಬಿಎಫ್‌ಸಿಗೆ ಸತತ 4ನೇ ಸೋಲು!

ಮುಂಬೈ: 9ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಲ್ಲಿ ಬೆಂಗಳೂರು ಎಫ್‌ಸಿ ಸತತ 4ನೇ ಸೋಲು ಕಂಡಿದೆ. ಗುರುವಾರ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 0-4 ಗೋಲುಗಳಲ್ಲಿ ಬಿಎಫ್‌ಸಿ ಪರಾಭವಗೊಂಡಿತು. ಈ ಸೋಲಿನೊಂದಿಗೆ ಸುನಿಲ್‌ ಚೆಟ್ರಿ ಪಡೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.

ಮರಡೋನಾ 'ಹ್ಯಾಂಡ್‌ ಆಫ್‌ ಗಾಡ್‌' ಚೆಂಡು 19 ಕೋಟಿ ರುಪಾಯಿಗೆ ಸೇಲ್..!

14ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದ ಮುಂಬೈ ಮೊದಲಾರ್ಧದಲ್ಲಿ 2-0 ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲೂ 2 ಗೋಲು ಬಾರಿಸಿ ಗೆಲುವು ಸಾಧಿಸಿತು. ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ನ.26ರಂದು ಎಫ್‌ಸಿ ಗೋವಾ ವಿರುದ್ಧ ಆಡಲಿದೆ.

ವಿಂಬಲ್ಡನ್‌: ಆಟಗಾರ್ತಿಯರು ಬಣ್ಣದ ಶಾರ್ಟ್ಸ್ ಧರಿಸಲು ಓಕೆ

ಲಂಡನ್‌: ಮಹಿಳಾ ಟೆನಿಸಿಗರು ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ವೇಳೆ ಸಾಂಪ್ರದಾಯಿಕ ಬಿಳಿ ಸ್ಕರ್ಚ್‌ ಅಥವಾ ಶಾರ್ಟ್ಸ್ ಧರಿಸಬೇಕಿಲ್ಲ ಎಂದು ಟೂರ್ನಿ ಆಯೋಜಕರು ತಿಳಿಸಿದ್ದಾರೆ. ಋುತುಸ್ರಾವದ ಸಮಯದಲ್ಲಿ ಅಸುಖಕರ ಅನುಭವವಾಗಬಾರದು ಎನ್ನುವ ಉದ್ದೇಶದಿಂದ ಮಹಿಳಾ ಟೆನಿಸ್‌ ಸಂಸ್ಥೆ(ಡಬ್ಲ್ಯುಟಿಎ), ಉಡುಪುಗಳ ತಯಾರಕರು, ವೈದ್ಯಕೀಯ ತಂಡಗಳೊಂದಿಗೆ ಚರ್ಚಿಸಿ ಆಟಗಾರ್ತಿಯರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಂಬಲ್ಡನ್‌ ಆಯೋಜಿಸುವ ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಸ್ಯಾಲಿ ಬೋಲ್ಟನ್‌ ತಿಳಿಸಿದ್ದಾರೆ.

Follow Us:
Download App:
  • android
  • ios