ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಗೆ ಭಾರತ ತಂಡ ಪ್ರಕಟ

ದುಬೈನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಕಬಡ್ಡಿ ಮಾಸ್ಟರ್ಸ್ ಟೂರ್ನಿಗೆ ಭಾರತ, ಪಾಕಿಸ್ತಾನ ಸೇರಿದಂತೆ 6 ರಾಷ್ಟ್ರಗಳು ತಮ್ಮ ತಮ್ಮ ತಂಡ ಪ್ರಕಟಿಸಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿರುವ ಕಾರಣ ಇವರ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Kabaddi Masters Dubai: Squads named for kabaddi’s biggest international spectacle

ದೆಹಲಿ(ಜೂ.18): ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ. ಜೂನ್ 22 ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಮಹತ್ವದ ಟೂರ್ನಿಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಇದೀಗ ಭಾರತ ಸೇರಿದಂತೆ 6 ದೇಶಗಳು ಪಾಲ್ಗೊಳ್ಳುತ್ತಿರುವ ಮಹತ್ವದ ಟೂರ್ನಿಗೆ ತಂಡವನ್ನ ಪ್ರಕಟಿಸಲಾಗಿದೆ. 

ಭಾರತ, ಪಾಕಿಸ್ತಾನ, ಇರಾನ್, ಕೊರಿಯಾ, ಅರ್ಜೇಂಟೀನಾ ಹಾಗೂ ಕೀನ್ಯಾ ತಂಡಗಳು ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. 9 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ. ಹೀಗಾಗಿ ಬದ್ಧವೈರಿಗಳ ಮುಖಾಮುಖಿ ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ: ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ

ಭಾರತ ತಂಡ: 
ರೋಹಿತ್ ಕುಮಾರ್, ಮಂಜೀತ್ ಚಿಲ್ಲರ್, ಅಜಯ್ ಠಾಕೂರ್, ಮೋನು ಗೋಯತ್, ರಿಷಾಂಕ್ ದೇವಾಡಿಗ, ರಾಹುಲ್ ಚೌಧರಿ, ಪ್ರದೀಪ್ ನರ್ವಾಲ್, ದೀಪಕ್, ಸುರ್ಜೀತ್, ರಾಜು ಲಾಲ್ ಚೌಧರಿ, ಮೋಹಿತ್ ಚಿಲ್ಲರ್, ಸಂದೀಪ್, ಸುರೇಂದ್ರ ನಾಡಾ ಹಾಗೂ ಗಿರೀಶ್ ಮಾರುತಿ 
 

Latest Videos
Follow Us:
Download App:
  • android
  • ios