ಹುಬ್ಬಳ್ಳಿ(ಸೆ.17): ಕರ್ನಾಟಕ ಪ್ರೀಮಿಯರ ಲೀಗ್ ಟ್ವಿಂಟಿ-20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗುತ್ತಿದೆ. 5ನೇ ಅವೃತ್ತಿಯ ಮೊದಲ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟು 21 ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಇದಕ್ಕಾಗಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನ ಸಕಲ ರೀತಿಯಲ್ಲಿ ಸಿದ್ದತೆ ಮಾಡಲಾಗಿದೆ. ಒಟ್ಟ 10 ಹೊನಲು ಬೆಳಕಿನ ಪಂದ್ಯಗಳು ನಡೆಯಲಿದೆ.
ಹೊನಲು ಬೆಳಕಿನ ವೈಭವದಲ್ಲಿ ಚುಟುಕು ಕ್ರಿಕೆಟ್ ಕಣ್ಣತುಂಬಿಕೊಳ್ಳಲು ಅವಳಿ ನಗರ ಅಭಿಮಾನಿಗಳು ಸಜ್ಜಾಗಿದ್ದಾರೆ. ಕಾವೇರಿ ಗಲಾಟೆಯಿಂದಾಗಿ ಉದ್ಘಾಟನಾ ಪಂದ್ಯಸೇರಿ ಮೊದಲ ಹಂತ ಎಲ್ಲ ಪಂದ್ಯಗಳನ್ನ ಮೈಸೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ.
