ಮೆಲ್ಬರ್ನ್(ಜು.28]: ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ಬೆಳವಣಿಗೆಯಲ್ಲಿ ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್‌ಗೆ ಆಟಗಾರರ ಆಯ್ಕೆ ಜವಾಬ್ದಾರಿಯನ್ನೂ ನೀಡಿದೆ.

ಟಿ20 ತಂಡದ ಆಯ್ಕೆ ಸಮಿತಿಗೆ ಲ್ಯಾಂಗರ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರಿದ್ದು, ಟ್ರೆವರ್ ಹಾನ್ಸ್ ಹಾಗೂ ಗ್ರೆಗ್ ಚಾಪೆಲ್‌ರನ್ನು ಒಳಗೊಂಡಿದೆ. 

ಲ್ಯಾಂಗರ್ ಸಲಹೆ ಪಡೆದು ಹಾನ್ಸ್, ಟೆಸ್ಟ್ ಹಾಗೂ ಏಕದಿನ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಕಳೆದ ವರ್ಷ ಮುಖ್ಯ ಆಯ್ಕೆಗಾರ ಹುದ್ದೆಗೆ ಮಾರ್ಕ್ ವಾ ರಾಜೀನಾಮೆ ನೀಡಿದ್ದರು. ಆ ಬಳಿಕ ಆಯ್ಕೆಗಾರನ ಸ್ಥಾನ ಖಾಲಿ ಇತ್ತು. ಆಸ್ಟ್ರೇಲಿಯಾ ತಂಡವು ಅಕ್ಟೋಬರ್’ನಲ್ಲಿ ವಿಶ್ವದ ನಂ.1 ಟಿ20 ತಂಡವಾದ ಪಾಕಿಸ್ತಾನದ ವಿರುದ್ಧ ಕಾದಾಡಲಿದೆ.