ಶೂಟಿಂಗ್: ಏಷ್ಯನ್ ಗೇಮ್ಸ್‌ಗಿಲ್ಲ ಜಿತು ರೈ
2014ರ ಇಂಚನ್ ಏಷ್ಯನ್ ಗೇಮ್ಸ್’ನಲ್ಲಿ ಜಿತು ರೈ ಮೊದಲ ದಿನವೇ ಚಿನ್ನದ ಪದಕ ಪದಕ ಗೆದ್ದ ಭಾರತದ ಪರ ಪದಕದ ಖಾತೆ ತೆರೆದಿದ್ದಾರೆ.
ನವದೆಹಲಿ[ಜೂ.30]: ಭಾರತದ ಅನುಭವಿ ಶೂಟರ್‌ಗಳಾದ ಗಗನ್ ನಾರಂಗ್, ಜಿತು ರಾಯ್ ಮತ್ತು 17 ವರ್ಷದ ಯುವ ಶೂಟರ್ ಮೆಹುಲಿ ಘೋಷ್, ಏಷ್ಯನ್ ಗೇಮ್ಸ್ ತಂಡದಿಂದ ಹೊರಬಿದ್ದಿದ್ದಾರೆ.
ಆಗಸ್ಟ್ 18ರಿಂದ ಆರಂಭವಾಗಲಿರುವ ಏಷ್ಯನ್ಸ್ ಗೇಮ್ಸ್‌ಗೆ ಶುಕ್ರವಾರ ಭಾರತ ತಂಡ ಪ್ರಕಟಗೊಂಡಿತು. ಕಿರಿಯರ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ 16 ವರ್ಷದ ಶೂಟರ್ ಮನು ಭಾಕರ್, ಅನುಭವಿ ಹೀನಾ ಸಿಧು ಮಹಿಳೆಯರ ವಿಭಾಗದಲ್ಲಿ ಭಾರತದ ಸವಾಲನ್ನು ಮುನ್ನಡೆಸಿದರೆ, ಪುರುಷರ ವಿಭಾಗದಲ್ಲಿ ರವಿ ಕುಮಾರ್, ದೀಪಕ್ ಕುಮಾರ್ ಹಾಗೂ 16 ವರ್ಷದ ಅನೀಶ್ ಭನವಾಲಾ ಪ್ರಮುಖರಾಗಿದ್ದಾರೆ.
2014ರ ಇಂಚನ್ ಏಷ್ಯನ್ ಗೇಮ್ಸ್’ನಲ್ಲಿ ಜಿತು ರೈ ಮೊದಲ ದಿನವೇ ಚಿನ್ನದ ಪದಕ ಪದಕ ಗೆದ್ದ ಭಾರತದ ಪರ ಪದಕದ ಖಾತೆ ತೆರೆದಿದ್ದಾರೆ.