ಜೈಪುರ[ಮೇ.09]: ಜೆಮಿಯಾ ರೋಡ್ರಿಗರ್ಸ್ ಆಕರ್ಷಕ ಅರ್ಧಶತಕದ ನೆರವಿನಿಂದ ಸೂಪರ್’ನೋವಾಸ್ ತಂಡವು ನಿಗದಿತ 20 ಓವರ್’ಗಳಲ್ಲಿ 142 ರನ್ ಬಾರಿಸಿದ್ದು, ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೂಪರ್’ನೋವಾಸ್ ಆರಂಭದಲ್ಲೇ ಪ್ರಿಯಾ ಪೂನಿಯಾ[16] ವಿಕೆಟ್ ಕಳೆದುಕೊಂಡಿತು. ಶಿಖಾ ಪಾಂಡೆ ವೆಲಾಸಿಟಿ ತಂಡಕ್ಕೆ ಮೊದಲ ಮುನ್ನಡೆ ತಂದಿತ್ತರು. ಆ ಬಳಿಕ ಚಮಾರಿ ಅಟಪಟ್ಟು ಕೂಡಿಕೊಂಡ ಜೆಮಿಯಾ ರೋಡ್ರಿಗರ್ಸ್ ತಂಡಕ್ಕೆ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್’ಗೆ 53 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 80ರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಚಮಾರಿ 31 ರನ್ ಬಾರಿಸಿ ಅಮೇಲಿಯಾ ಕೆರ್ರ್’ಗೆ ವಿಕೆಟ್ ಒಪ್ಪಿಸಿದರು. ಸೋಪಿಯಾ ಡಿವೈನ್ ಬ್ಯಾಟಿಂಗ್ ಕೇವಲ 9 ರನ್’ಗಳಿಗೆ ಸೀಮಿತವಾಯಿತು. ಮತ್ತೊಂದೆಡೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ರೋಡ್ರಿಗರ್ಸ್ ಕೇವಲ 48 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಬಾರಿಸಿ ಅಜೇಯರಾಗುಳಿದರು.

ವೆಲಾಸಿಟಿ ಪರ ಅಮೇಲಿಯಾ ಕೆರ್ರ್ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ 1 ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:

ಸೂಪರ್’ನೋವಾ: 142/3

ರೋಡ್ರಿಗರ್ಸ್: 77*

ಅಮೇಲಿಯಾ ಕೆರ್ರ್: 21/2

(* ವಿವರ ಅಪೂರ್ಣ]