10ನೇ ಆವೃತ್ತಿಯ ಐಪಿಎಲ್'ನಲ್ಲಿ ಇದು ಮೂರನೇ ಹ್ಯಾಟ್ರಿಕ್ ಆಗಿದ್ದು, ಈ ಮೊದಲು ಸಾಮ್ಯುಯಲ್ ಬದ್ರಿ ಹಾಗೂ ಆ್ಯಂಡ್ರೂ ಟೈ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಬೆಂಗಳೂರು(ಮೇ.06): ಸೌರಾಷ್ಟ್ರ ವೇಗಿ ಜಯದೇವ್ ಉನಾದ್ಕಟ್ ಇಂದು ಸನ್'ರೈಸರ್ಸ್ ಹೈದರಾಬಾದ್ ಎದುರು ಚೊಚ್ಚಲ ಹ್ಯಾಟ್ರಿಕ್ ಸಾಧನೆ ಮಾಡಿ ಸಂಭ್ರಮಿಸಿದರು. ಕೊನೆಯ ಓವರ್'ನಲ್ಲಿ ಹೈದರಾಬಾದ್'ಗೆ 12 ರನ್'ಗಳ ಅವಶ್ಯಕತೆಯಿತ್ತು.

19ನೇ ಓವರ್ ಬೌಲಿಂಗ್ ಮಾಡಿದ ಉನಾದ್ಕಟ್ ಸತತ ಮೂರು ಎಸೆತಗಳಲ್ಲಿ ಸನ್'ರೈಸರ್ಸ್ ಪಡೆಯ ಮೂರು ವಿಕೆಟ್ ಉರುಳಿಸಿದ್ದು ಮಾತ್ರವಲ್ಲದೇ ಐಪಿಎಲ್ ಕ್ರಿಕೆಟ್'ನಲ್ಲಿ ನೂರು ವಿಕೆಟ್ ಪಡೆದ ಬೌಲರ್ ಎನ್ನುವ ಶ್ರೇಯಕ್ಕೂ ಭಾಜನರಾದರು. 10ನೇ ಆವೃತ್ತಿಯ ಐಪಿಎಲ್'ನಲ್ಲಿ ಇದು ಮೂರನೇ ಹ್ಯಾಟ್ರಿಕ್ ಆಗಿದ್ದು, ಈ ಮೊದಲು ಸಾಮ್ಯುಯಲ್ ಬದ್ರಿ ಹಾಗೂ ಆ್ಯಂಡ್ರೂ ಟೈ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಸ್ಯಾಮ್ಯಯಲ್ ಬದ್ರಿ ಹ್ಯಾಟ್ರಿಕ್ ಪಡೆದ ಕ್ಷಣ ನೋಡಿ...

ಆ್ಯಂಡ್ರೋ ಟೈ ಹ್ಯಾಟ್ರಿಕ್ ಪಡೆದ ರೋಚಕ ಕ್ಷಣವಿದು..

ಕಡೆಯ ಓವರ್'ನಲ್ಲಿ ಸೌರಾಷ್ಟ್ರ ವೇಗಿ ಹ್ಯಾಟ್ರಿಕ್ ವಿಕೆಟ್ ಪಡೆದದ್ದು ಮಾತ್ರವಲ್ಲದೇ ಮೇಡನ್ ಮಾಡಿಯೂ ಮಿಂಚಿದರು. ಜಯ್'ದೇವ್ ಮಾಡಿದ ಹ್ಯಾಟ್ರಿಕ್ ನಿಮ್ಮಮುಂದೆ...