ನವದೆಹಲಿ(ಡಿ.24): ಜಾವಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯ ಕ್ರೀಡಾಪಟುವಾಗಿದ್ದಾರೆ. ಆದರೆ ನೀರಜ್‌ರ ಕೋಚ್‌ ಉವ್‌ ಹೋನ್‌, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಏಷ್ಯನ್ ಗೇಮ್ಸ್ 2018: ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ

‘ನೀರಜ್‌ ತರಬೇತಿಗೆ ಸಾಯ್‌ ಸಹಕರಿಸುತ್ತಿಲ್ಲ. ಅಗತ್ಯವಿರುವ ಗುಣಮಟ್ಟದ ಜಾವಲಿನ್‌ಗಳನ್ನು ತರಿಸುತ್ತಿಲ್ಲ. ಜತೆಗೆ ತರಬೇತಿ ವೇಳೆ ಸಹಾಯಕ ಸಿಬ್ಬಂದಿ ಕೊರತೆ ಬಹಳಷ್ಟಿದೆ’ ಎಂದು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನ ಅಟಲ್‌ಗೆ ಅರ್ಪಿಸಿದ ನೀರಜ್

2018ರ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌, ಒಲಿಂಪಿಕ್ಸ್‌ ಮೇಲೆ ಚಿತ್ತ ನೆಟ್ಟಿದ್ದಾರೆ. ಜಾವಲಿನ್‌ ಕೋಚ್‌ ದೂರಿಗೆ ಸಾಯ್‌ ನಿರ್ದೇಶಕಿ ನೀಲಮ್‌ ಕೌರ್‌ರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.