ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 9ನೇ ದಿನದ ಅಂತ್ಯದ ವೇಳೆಗೆ ಭಾರತ ಪದಕ ಗಳಿಕೆ ವೇಗ ಹೆಚ್ಚಾಗಿದೆ.  9ನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಏಷ್ಟು? ಇಲ್ಲಿದೆ.

ಜಕರ್ತಾ(ಆ.27): ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತದ ಜಾವೆಲಿ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಇದೀಗ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

5 ಸುತ್ತುಗಳಲ್ಲೂ ನೀರಜ್ ಚೋಪ್ರಾ ಅಗ್ರಸ್ಥಾನ ಕಾಪಾಡಿಕೊಂಡರು. ಅಂತಿಮ ಸುತ್ತಿನಲ್ಲಿ ನೀರಜ್ ಚೋಪ್ರಾ 86.36 ಮೀಟರ್ ದೂರ ಎಸೆಯೋ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಇಷ್ಟೇ ಅಲ್ಲ ಗರಿಷ್ಠ ದೂರ ಎಸೆಯೋ ಮೂಲಕ ದಾಖಲೆ ಬರೆದರು. ಈ ಮೂಲಕ ಭಾರತ 8ನೇ ಚಿನ್ನ ಸಂಪಾದಿಸಿತು.

Scroll to load tweet…

ಭಾರತ ಪದಕ ಪಟ್ಟಿಯಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 40 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 84 ಚಿನ್ನ, 60 ಬೆಳ್ಳಿ ಹಾಗೂ 40 ಕಂಚಿನೊಂದಿಗೆ ಒಟ್ಟು 184 ಪದಕ ಪಡೆದುಕೊಂಡಿದೆ.