Asianet Suvarna News Asianet Suvarna News

ನಿನ್ನೆ ನೀವು ಸೂಪರ್ ಓವರ್ ನೋಡೋದನ್ನು ಮಿಸ್ ಮಾಡಿಕೊಂಡಿದ್ದೀರಾ..?

ಮುಂಬೈ ಪರ ಚಾಣಾಕ್ಷ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಮುಂಬೈಗೆ ಸ್ಮರಣೀಯ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

Jasprit Bumrah hands Mumbai Indians super over win vs Gujarat Lions in IPL 2017
  • Facebook
  • Twitter
  • Whatsapp

ಬೆಂಗಳೂರು(ಏ.30) ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು 10ನೇ ಆವೃತ್ತಿಯ ಐಪಿಎಲ್'ನಲ್ಲಿ ಮೊದಲ ಸೂಪರ್ ಓವರ್‌ಗೆ ಸಾಕ್ಷಿಯಾಯಿತು.

ಮುಂಬೈ ಇಂಡಿಯನ್ಸ್ ತಂಡ ಅಂತಿಮ ಓವರ್'ನಲ್ಲಿ ಗೆಲ್ಲಲು 11ರನ್'ಗಳ ಅವಶ್ಯಕತೆಯಿತ್ತು. ಆದರೆ ಇರ್ಫಾನ್ ಪಠಾಣ್ ಶಿಸ್ತುಬದ್ಧ ದಾಳಿ ಹಾಗೂ ರವೀಂದ್ರ ಜಡೇಜಾ ಅವರ ಚುರುಕಿನ ಕ್ಷೇತ್ರರಕ್ಷಣೆಯ ಫಲದಿಂದ ರೋಹಿತ್ ಪಡೆಯನ್ನು ಕೇವಲ 10ರನ್'ಗೆ ನಿಯಂತ್ರಿಸುವಲ್ಲಿ ರೈನಾ ಪಡೆ ಯಶಸ್ವಿಯಾಯಿತು. ಹೀಗಾಗಿ ಉಭಯ ತಂಡಗಳು ಸೂಪರ್ ಓವರ್ ಮೊರೆ ಹೋಗಬೇಕಾಯಿತು.

ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಟೂರ್ನಿಯ ಮೊದಲ ಸೂಪರ್ ಓವರ್'ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಕಿರಾನ್ ಪೊಲ್ಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 11 ರನ್ ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ ಲಯನ್ಸ್ ತಂಡ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಚಾಣಾಕ್ಷ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ ಮುಂಬೈಗೆ ಸ್ಮರಣೀಯ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

ಆ ಥ್ರಿಲ್ಲಿಂಗ್ ಸೂಪರ್ ಓವರ್ ನಿಮಗಾಗಿ....

Follow Us:
Download App:
  • android
  • ios