ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಪ್ರಣಯ್‌ ಹಾಂಕಾಂಗ್‌ನ ಲೀ ಚ್ಯುಕ್‌ ಯು ವಿರುದ್ಧ 22-20, 19-21, 21-17 ಅಂತರದಲ್ಲಿ ಜಯಗಳಿಸಿದರು. ಆದರೆ ಲಕ್ಷ್ಯ ಸೇನ್‌ ಹಾಗೂ ಪ್ರಿಯಾನ್ಶು ರಾಜಾವರ್‌ ಸೋತು ಹೊರಬಿದ್ದರು. ಮಂಗಳವಾರ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಕೂಡಾ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದರು.

ಕುಮಮೊಟೊ(ನ.16): ಭಾರತ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಇಲ್ಲಿ ನಡೆಯುತ್ತಿರುವ ಜಪಾನ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಇದರೊಂದಿಗೆ ಪ್ರಣಯ್‌ ಮಾತ್ರ ಟೂರ್ನಿಯಲ್ಲಿ ಉಳಿದುಕೊಂಡಿದ್ದು, ಇತರರು ಅಭಿಯಾನ ಕೊನೆಗೊಳಿಸಿದ್ದಾರೆ. 

ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಪ್ರಣಯ್‌ ಹಾಂಕಾಂಗ್‌ನ ಲೀ ಚ್ಯುಕ್‌ ಯು ವಿರುದ್ಧ 22-20, 19-21, 21-17 ಅಂತರದಲ್ಲಿ ಜಯಗಳಿಸಿದರು. ಆದರೆ ಲಕ್ಷ್ಯ ಸೇನ್‌ ಹಾಗೂ ಪ್ರಿಯಾನ್ಶು ರಾಜಾವರ್‌ ಸೋತು ಹೊರಬಿದ್ದರು. ಮಂಗಳವಾರ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಕೂಡಾ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದರು.

ಭಾರತದ ಕ್ಯಾಂಡಿಟೇಟ್ಸ್‌ ಅಥ್ಲೀಟ್ಸ್‌ಗಳ ಸಿದ್ಧತೆಗಾಗಿ ಚೆಸ್‌ ಒಕ್ಕೂಟ ₹2 ಕೋಟಿ ಸಹಾಯಧನ!

ನವದೆಹಲಿ: 2024ರ ಏ.2ರಿಂದ 24ರ ವರೆಗೆ ಕೆನಡಾದಲ್ಲಿ ನಡೆಯಲಿರುವ ಚೆಸ್‌ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಮೂವರು ಚೆಸ್‌ ಪಟುಗಳಿಗೆ ಸಿದ್ಧತೆಗಾಗಿ ಅಖಿಲ ಭಾರತ ಚೆಸ್‌ ಫೆಡರೇಶನ್‌(ಎಐಸಿಎಫ್‌) 2 ಕೋಟಿ ರು. ಸಹಾಯಧನ ಘೋಷಿಸಿದೆ. ಪುರುಷರ ವಿಭಾಗದಲ್ಲಿ ಆರ್‌.ಪ್ರಜ್ಞಾನಂದ, ವಿದಿತ್‌ ಗುಜರಾತಿ, ಮಹಿಳೆಯರ ವಿಭಾಗದಲ್ಲಿ ಆರ್‌.ವೈಶಾಲಿ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಗೆದ್ದವರು ಹಾಲಿ ವಿಶ್ವ ಚಾಂಪಿಯನ್‌ ಜೊತೆ ಚಾಂಪಿಯನ್‌ ಪಟ್ಟಕ್ಕಾಗಿ ಸೆಣಸಲಿದ್ದಾರೆ.

ICC World Cup 2023: ವಿರಾಟ್ ಕೊಹ್ಲಿ ಕೊಂಡಾಡಿದ ಪ್ರಧಾನಿ ಮೋದಿ..!

ಫಿಫಾ: ಅರ್ಹತಾ ಸುತ್ತಿನಲ್ಲಿ ಇಂದು ಭಾರತ vs ಕುವೈತ್‌

ಕುವೈತ್‌: 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಗುರುವಾರ ಭಾರತಕ್ಕೆ ಕುವೈತ್‌ ಸವಾಲು ಎದುರಾಗಲಿದೆ. 36 ತಂಡಗಳಿರುವ ಅರ್ಹತಾ ಟೂರ್ನಿಯನ್ನು ತಲಾ 4 ತಂಡಗಳಿರುವ 9 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಹಂತ ಹಾಗೂ 2027ರ ಎಎಫ್‌ಸಿ ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯಲಿವೆ. ಭಾರತ ‘ಎ’ ಗುಂಪಿನಲ್ಲಿದ್ದು, ಇತರ 3 ತಂಡಗಳ ವಿರುದ್ಧ ತಲಾ 2 ಬಾರಿ ಆಡಲಿದೆ. ನ.21ರಂದು ಕತಾರ್‌ ವಿರುದ್ಧ ಆಡಲಿರುವ ಭಾರತಕ್ಕೆ 2024ರ ಮಾರ್ಚ್‌ 21ರಂದು ಅಫ್ಘಾನಿಸ್ತಾನ ಸವಾಲು ಎದುರಾಗಲಿದೆ. ಬಳಿಕ ಮಾ.26ಕ್ಕೆ ಮತ್ತೆ ಅಫ್ಘಾನಿಸ್ತಾನ, ಜೂ.6ಕ್ಕೆ ಕುವೈತ್‌, ಜೂ.11ಕ್ಕೆ ಕತಾರ್‌ ವಿರುದ್ಧ ಆಡಲಿದೆ.

'ತಂಡಕ್ಕಾಗಿ ಆಡು, ಗೆಲುವಿಗಾಗಿ ಆಡು..' ನನ್ನ ಆಟಕ್ಕೆ ಇದೇ ಸ್ಪೂರ್ತಿ: ವಿರಾಟ್‌ ಕೊಹ್ಲಿ

ಇಸ್ಲಾಂಗೆ ಮತಾಂತರಕ್ಕೆ ಭಜ್ಜಿ ಸಿದ್ಧವಾಗಿದ್ರು: ಇಂಜಿ!

ಲಾಹೋರ್‌: ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಇಸ್ಲಾಂಗೆ ಮತಾಂತರಗೊಳ್ಳಲು ಸಿದ್ಧವಾಗಿದ್ದರು ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಇಂಜಿ, ‘ಮೌಲಾನಾ ತಾರೀಖ್‌ ಜಮೀಲ್‌ರ ಮಾತುಗಳಿಂದ ಹರ್ಭಜನ್‌ ಪ್ರಭಾವಿತವಾಗಿದ್ದರು. ಅವರ ಮಾತುಗಳಿಗೆ ಆಕರ್ಷಿತರಾಗಿ, ಅವರನ್ನು ಅನುಸರಿಸಲು ಸಿದ್ಧವಾಗಿದ್ದರು’ ಎಂದಿದ್ದಾರೆ. ಇದರ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಹರ್ಭಜನ್‌ ಟ್ವೀಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ಇಂಜಿ ಈ ರೀತಿ ಸುಳ್ಳು ಹೇಳುವಾಗ ಯಾವ ನಶೆಯಲ್ಲಿದ್ದರೋ ಗೊತ್ತಿಲ್ಲ. ನಾನು ಹೆಮ್ಮೆಯ ಭಾರತೀಯ ಮತ್ತು ಸಿಖ್‌’ ಎಂದಿದ್ದಾರೆ.