ಸತತ ಗಾಯಗಳಿಂದ ಬಳಲುತ್ತಿರುವ ಜಿಮ್ಮಿ ಕಳೆದ ಆಗಸ್ಟ್'ನಿಂದ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.  ನವೆಂಬರ್ 9ರೊಳಗೆ ಆ್ಯಂಡರ್ಸನ್ ಗುಣಮುಖರಾಗುವ ಸಾಧ್ಯತೆ ತೀರಾ ಕಡಿಮೆ, ಆದರೂ ಭಾರತ ವಿರುದ್ಧದ ಸರಣಿ ವೇಳೆಗೆ ಜಿಮ್ಮಿ ಚೇತರಿಸಿಕೊಂಡರೆ ತಂಡಕ್ಕೆ ಹೆಚ್ಚಿನ ಬಲ ಬರಲಿದೆ ಎಂದು ಕುಕ್ ಹೇಳಿದರು.

ಲಂಡನ್(ಅ.19): ಇಂಗ್ಲೆಂಡ್ ತಂಡದ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್, ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದಾರೆ ಎಂದು ನಾಯಕ ಅಲಿಸ್ಟರ್ ಕುಕ್ ಹೇಳಿದ್ದಾರೆ.

ಈ ಹಿಂದೆ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ 2 ಪಂದ್ಯಗಳ ಟೆಸ್ಟ್ ಸರಣಿಗೂ ಆ್ಯಂಡರ್ಸನ್ ಹೊರಗುಳಿದಿದ್ದರು. ಚಿತ್ತಾಗಾಂಗ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ವೇಳೆ ಅಭ್ಯಾಸದಲ್ಲಿದ್ದಾಗ ಆ್ಯಂಡರ್ಸನ್ ಎಡ ಭುಜದ ನೋವಿಗೆ ತುತ್ತಾಗಿದ್ದರು.

ಸತತ ಗಾಯಗಳಿಂದ ಬಳಲುತ್ತಿರುವ ಜಿಮ್ಮಿ ಕಳೆದ ಆಗಸ್ಟ್'ನಿಂದ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ನವೆಂಬರ್ 9ರೊಳಗೆ ಆ್ಯಂಡರ್ಸನ್ ಗುಣಮುಖರಾಗುವ ಸಾಧ್ಯತೆ ತೀರಾ ಕಡಿಮೆ, ಆದರೂ ಭಾರತ ವಿರುದ್ಧದ ಸರಣಿ ವೇಳೆಗೆ ಜಿಮ್ಮಿ ಚೇತರಿಸಿಕೊಂಡರೆ ತಂಡಕ್ಕೆ ಹೆಚ್ಚಿನ ಬಲ ಬರಲಿದೆ ಎಂದು ಕುಕ್ ಹೇಳಿದರು.

ಇಂಗ್ಲೆಂಡ್ ಪರ 2003ರಲ್ಲಿ ಟೆಸ್ಟ್ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿರುವ ಜೇಮ್ಸ್ ಆ್ಯಂಡರ್'ಸನ್ 463 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬಲಗೈ ವೇಗಿ ಅತಿ ಹೆಚ್ಚು ವಿಕೆಟ್ ಪಡೆದ ಟೆಸ್ಟ್ ಬೌಲರ್'ಗಳ ಪೈಕಿ ಆರನೇ ಆಟಗಾರ ಎನಿಸಿದ್ದಾರೆ.