ಟೆಸ್ಟ್'ನಲ್ಲಿ ಅತಿಹೆಚ್ಚು ಎಸೆತ ಬೌಲ್ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಆ್ಯಂಡರ್‌ಸನ್ 4ನೇ ಸ್ಥಾನ ಪಡೆದಿದ್ದಾರೆ.

ಕ್ರೈಸ್ಟ್'ಚರ್ಚ್: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತ ಬೌಲ್ ಮಾಡಿದ ವೇಗದ ಬೌಲರ್ ಎನ್ನುವ ದಾಖಲೆ ಯನ್ನು ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ ಸನ್ ಬರೆದಿದ್ದಾರೆ.

ವೆಸ್ಟ್ಇಂಡೀಸ್‌ನ ಕರ್ಟ್ನಿ ವಾಲ್ಶ್ (30,019 ಎಸೆತ)ರನ್ನು ಆ್ಯಂಡ ರ್‌ಸನ್ (30,074 ಎಸೆತ) ಹಿಂದಿಕ್ಕಿದ್ದಾರೆ. ಟೆಸ್ಟ್'ನಲ್ಲಿ ಅತಿಹೆಚ್ಚು ಎಸೆತ ಬೌಲ್ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಆ್ಯಂಡರ್‌ಸನ್ 4ನೇ ಸ್ಥಾನ ಪಡೆದಿದ್ದಾರೆ. ಮುತ್ತಯ್ಯ ಮುರಳಿಧರನ್ (44039 ಎಸೆತ), ಅನಿಲ್ ಕುಂಬ್ಳೆ (40850 ಎಸೆತ), ಶೇನ್ ವಾರ್ನ್ (40705 ಎಸೆತ) ಕ್ರಮವಾಗಿ ಮೊದಲ 3 ಸ್ಥಾನದಲ್ಲಿದ್ದಾರೆ.