ಐಸ್ ಕ್ರಿಕೆಟ್: ಸೆಹ್ವಾಗ್ ಪಡೆಗೆ ಮತ್ತೆ ನಿರಾಸೆ; ಕ್ಲೀನ್ ಸ್ವೀಪ್ ಮಾಡಿದ ಅಫ್ರಿದಿ ಬಾಯ್ಸ್

First Published 9, Feb 2018, 9:52 PM IST
Jacques Kallis slams unbeaten 90 to help Shahid Afridi Royals defeat Virender Sehwag Diamonds
Highlights

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸೆಹ್ವಾಗ್ ಪಡೆ 205 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಕೈಫ್ 57 ರನ್ ಬಾರಿಸಿದರೆ, ನಾಯಕ ಸೆಹ್ವಾಗ್ 48 ರನ್ ಗಳಿಸಿದರು.

ಸೆಂಟ್ ಮೋರಿಟ್ಜ್(ಫೆ.09): ಜಾಕ್ ಕಾಲಿಸ್ ಅಜೇಯ (91) ಮತ್ತು ಗ್ರೇಮ್ ಸ್ಮಿತ್ (58) ರನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶಾಹಿದ್ ಅಫ್ರಿದಿ ನೇತೃತ್ವದ ರಾಯಲ್ಸ್ ಇಲೆವೆನ್, ಐಸ್ ಕ್ರಿಕೆಟ್‌'ನ 2ನೇ ಪಂದ್ಯದಲ್ಲಿ ಡೈಮಂಡ್ಸ್ ಇಲೆವೆನ್ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ರಾಯಲ್ಸ್ ಇಲೆವೆನ್ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸೆಹ್ವಾಗ್ ಪಡೆ 205 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಕೈಫ್ 57 ರನ್ ಬಾರಿಸಿದರೆ, ನಾಯಕ ಸೆಹ್ವಾಗ್ 48 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೊರ್: ಡೈಮಂಡ್ ಇಲೆವೆನ್ : 205/5 (ಕೈಫ್ 57, ಸೆಹ್ವಾಗ್ 46)

ರಾಯಲ್ಸ್ ಇಲೆವೆನ್ : 206/2 (ಕಾಲಿಸ್ 91*, ಗ್ರೇಮ್ ಸ್ಮಿತ್ 58)

 

loader