ಸೆಮಿಫೈನಲ್‌ ಹಂತದಲ್ಲಿ ಮುಂಬೈ, ತಮಿಳು​ನಾಡು ವಿರುದ್ಧ ಗೆಲುವು ಪಡೆದರೆ, ಜಾರ್ಖಂಡ್‌ ವಿರುದ್ಧ ಭರ್ಜರಿ ಗೆಲುವು ಪಡೆದ ಗುಜರಾತ್‌ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ.

ಇಂದೋರ್‌(ಜ.10):ಬರೋಬ್ಬರಿ ಅರವತ್ತಾರು ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ ತಲುಪಿರುವ ಗುಜರಾತ್‌, ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿಹಿಡಿಯುವ ಕನವರಿಕೆಯ​ಲ್ಲಿದ್ದರೆ, ಇತ್ತ ದಾಖಲೆಯ 42ನೇ ಟ್ರೋಫಿ ಗೆಲ್ಲುವ ತುಡಿತದಲ್ಲಿದೆ ಮುಂಬೈ.

ಇಲ್ಲಿನ ಹೋಳ್ಕರ್‌ ಮೈದಾನದಲ್ಲಿ ನಡೆಯ​ಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಮುಂಬೈ ಗೆಲ್ಲುವ ಫೇವರಿಟ್‌ ಎನಿಸಿದರೂ, ಈ ಋುತುವಿನಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಾ 1950-51ರ ಬಳಿಕ ಫೈನಲ್‌'ಗೆ ಧಾವಿಸಿಬಂದ ಪಾರ್ಥೀವ್‌ ಪಟೇಲ್‌ ಸಾರ​ಥ್ಯದ ಗುಜರಾತ್‌ ತಂಡವು ಇತಿಹಾಸ ನಿರ್ಮಿ​ಸುವ ಗುರಿ ಹೊತ್ತಿದೆ. ಅಂದಹಾಗೆ ಮೊದಲ ಹಂತದ ಫೈನಲ್‌'ನಲ್ಲಿ ಗುಜರಾತ್‌, ಹೋಳ್ಕರ್‌ ತಂಡದೆದುರು ಸೋಲನುಭವಿಸಿ ರನ್ನರ್‌'ಅಪ್‌ ಸ್ಥಾನಕ್ಕೆ ತೃಪ್ತವಾಗಿತ್ತು.

ಸೆಮಿಫೈನಲ್‌ ಹಂತದಲ್ಲಿ ಮುಂಬೈ, ತಮಿಳು​ನಾಡು ವಿರುದ್ಧ ಗೆಲುವು ಪಡೆದರೆ, ಜಾರ್ಖಂಡ್‌ ವಿರುದ್ಧ ಭರ್ಜರಿ ಗೆಲುವು ಪಡೆದ ಗುಜರಾತ್‌ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ.

ಅನುಭವವೇಆಯುಧ:

 41 ಬಾರಿ ಟ್ರೋಫಿ ಗೆದ್ದು ರಣಜಿ ಇತಿಹಾಸದಲ್ಲೇ ಅದ್ವಿ​ತೀಯ ಸಾಧನೆ ಮಾಡಿರುವ ಮುಂಬೈ, ಈ ಬಾರಿ ಆದಿತ್ಯ ತಾರೆ ನಾಯಕತ್ವದಲ್ಲಿ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ನಾಯಕ ಆದಿತ್ಯ ತಾರೆ ಸೇರಿದಂತೆ ಶ್ರೇಯಸ್‌ ಅಯ್ಯರ್‌, ಸೂರ್ಯ​ಕುಮಾರ್‌ ಯಾದವ್‌'ರಂಥ ಪ್ರಚಂಡ ಬ್ಯಾಟ್ಸ್‌ಮನ್‌'ಗಳು ಮುಂಬೈನ ಬ್ಯಾಟಿಂಗ್‌ ಕ್ರಮಾಂ​ಕವನ್ನು ಬಲಿಷ್ಠಗೊಳಿಸಿದ್ದಾರೆ. ಇನ್ನು ತಮಿಳು​ನಾಡು ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ 17ರ ಯುವಕ ಪೃಥ್ವಿ ಶಾ ಮತ್ತೊಂದು ಮನೋಜ್ಞ ಇನ್ನಿಂಗ್ಸ್‌ಗೆ ಅಣಿ​ಯಾ​ಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್‌ ವಿಜಯ್‌ ಗೋಹೆಲ್‌ 27 ವಿಕೆಟ್‌ ಗಳಿಸಿ ತಂಡದ ಪರ ಗರಿಷ್ಠ ವಿಕೆಟ್‌ ಪಡೆದಾತ ಎನಿಸಿದ್ದಾರೆ.

ವಿಶ್ವಾಸದಲ್ಲಿ ಪಾರ್ಥೀವ್‌ ಪಡೆ: ಐತಿಹಾಸಿಕ ಹೊಸ್ತಿಲಲ್ಲಿರುವ ಗುಜರಾತ್‌ ಒಂದು ಹಂತದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಒತ್ತಡಕ್ಕೆ ಸಿಲುಕಿದೆಯಾದರೂ, ಅಚ್ಚರಿಯ ಫಲಿತಾಂಶ ನೀಡುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಒಂದು ತ್ರಿಶತಕ ಸೇರಿದಂತೆ ಪ್ರಿಯಾಂಕ್‌ ಪಾಂಚಲ್‌, ಈ ಋುತುವಿನ ರಣಜಿಯಲ್ಲಿ 1270 ರನ್‌ ಕಲೆಹಾಕಿದ್ದಾರೆ.