"10 ವರ್ಷಗಳ ಐಪಿಎಲ್ ಹಾದಿ ಅದ್ಭುತ ಪಯಣವಾಗಿದ್ದು. ಇದು ನನ್ನ ಬದುಕನ್ನು ಬದಲಿಸಿದೆ ಎಂದಿದ್ದಾರೆ."
ಬೆಂಗಳೂರು(ಮೇ.03): ಆಧುನಿಕ ಕ್ರಿಕೆಟ್'ನ ಸೂಪರ್ ಸ್ಟಾರ್, ಮಿ.360 ಎಂದೆಲ್ಲಾ ಕರೆಸಿಕೊಳ್ಳುವ ಎಬಿ ಡಿವಿಲಿಯರ್ಸ್ 10 ವರ್ಷಗಳ ತಮ್ಮ ಐಪಿಎಲ್ ಅನುಭವಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್'ನಲ್ಲಿ 21 ಶತಕ ಹಾಗೂ 39 ಅರ್ಧಶತಕಗಳ ಜತೆಗೆ 8 ಸಾವಿರ ರನ್ ಪೂರೈಸಿರುವ ಎಬಿಡಿ, ಶೂನ್ಯಕ್ಕೆ ವಿಕೆಟ್ ಒಪ್ಪಿಸದೇ ಅತಿಹೆಚ್ಚು ಇನಿಂಗ್ಸ್(78) ಆಡಿದ ಆಟಗಾರ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.
ಮೂರು ಪಂದ್ಯಗಳಲ್ಲಿ ಸತತ ಮೂರು ಬಾರಿ ಎಬಿ ಡಿವಿಲಿಯರ್ಸ್ ಶೂನ್ಯಕ್ಕೆ ಔಟಾಗಿದ್ದರು ಎಂದರೆ ನೀವು ನಂಬಲೇಬೇಕು. ಹೌದು 2016ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್'ನ ಎರಡನೇ ಇನಿಂಗ್ಸ್(ಜೋಹಾನ್ಸ್'ಬರ್ಗ್) ಹಾಗೂ ನಾಲ್ಕನೇ ಟೆಸ್ಟ್(ಸೆಂಚುರಿಯನ್)'ನ ಎರಡೂ ಇನಿಂಗ್ಸ್'ನಲ್ಲಿ ಎಬಿಡಿ ಗೋಲ್ಡನ್ ಡಕ್ ಆಗಿದ್ದರು. ಆ ಬಳಿಕ ಎಬಿಡಿ ಟೆಸ್ಟ್ ಪಂದ್ಯಗಳನ್ನೇ ಆಡಿಲ್ಲ.
ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಆರ್'ಸಿಬಿಯ ಸ್ಟೈಲೀಷ್ ಆಟಗಾರ ಯುನಿಸೆಫ್ ಕಾರ್ಯಕ್ರವೊಂದರಲ್ಲಿ 10 ವರ್ಷಗಳ ಐಪಿಎಲ್ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಐಪಿಎಲ್ ಒಂದು "ಗ್ರೇಟ್ ರೈಡ್" ಎಂದಿದ್ದಾರೆ.
"10 ವರ್ಷಗಳ ಐಪಿಎಲ್ ಹಾದಿ ಅದ್ಭುತ ಪಯಣವಾಗಿದ್ದು. ಇದು ನನ್ನ ಬದುಕನ್ನು ಬದಲಿಸಿದೆ ಎಂದಿದ್ದಾರೆ."
ನಾನು ಮೊದಲ ಮೂರು ವರ್ಷ ಡೆಲ್ಲಿ ಡೇರ್'ಡೆವಿಲ್ಸ್ ಪರವಾಗಿ ಆಡಿದೆ, ಅದೊಂದು ಅದ್ಭುತ ಅನುಭವ. ಆ ಬಳಿಕ ರಾಯಲ್ ಚಾಲೆಂಜರ್ಸ್ ತಂಡ ಕೂಡಿಕೊಂಡೆ. ಆರ್'ಸಿಬಿಗಿಂತ ಉತ್ತಮ ಪ್ರಾಂಚೈಸಿಯಿರಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇನೆ. ಅದೊಂದು ವೃತ್ತಿಪರ ಯೂನಿಟ್ ಆಗಿದೆ ಎಂದಿದ್ದಾರೆ.
ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ನಾವಂದುಕೊಂಡ ಹಾಗೆ ಆಡಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಸಾಕಷ್ಟು ಅಮೂಲ್ಯವಾದ ಪಾಠಗಳನ್ನು ಕಲಿತವು ಎಂದು ನನಗನಿಸುತ್ತದೆ. ಇನ್ನುಳಿದ ಪಂದ್ಯಗಳಲ್ಲಿ ಆರ್'ಸಿಬಿ ತನ್ನ ಗೌರವ ಉಳಿಸಿಕೊಳ್ಳಲಿದೆ ಎಂದು ಆರ್'ಸಿಬಿಯ ಸ್ಪೋಟಕ ಆಟಗಾರ ತಮ್ಮ ಐಪಿಎಲ್'ನ ನೆನಪಿನ ಬುತ್ತಿಯನ್ನು ಹಂಚಿಕೊಂಡಿದ್ದಾರೆ.
