ತಮ್ಮ 37ನೇ ವಯಸ್ಸಿನಲ್ಲೂ ಕರಾರುವಕ್ಕಾದ ದಾಳಿ ನಡೆಸುತ್ತಿರುವ ಎಡಗೈ ವೇಗಿ ಎರಡನೇ ಪಂದ್ಯದಲ್ಲಿ ಅಮೂಲ್ಯ ಮೂರು ವಿಕೆಟ್ ಪಡೆಯುವಲ್ಲಿ ನೆಹ್ರಾ ಯಶಸ್ವಿಯಾಗಿದ್ದರು.
ನವದೆಹಲಿ(ಜ.30): ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆಂಗ್ಲರ ವಿರುದ್ಧದ ಎರಡನೇ ಟಿ20 ಪಂದ್ಯ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯ ಅನುಭವಿ ಆಟಗಾರ ಆಶೀಶ್ ನೆಹ್ರಾ ಪಂದ್ಯದ ಬಳಿಕ ಮನಬಿಚ್ಚಿ ಮಾತನಾಡಿದ್ದಾರೆ.
'ಎಲ್ಲಿವರೆಗೆ ತಂಡ ಉತ್ತಮ ಪ್ರದರ್ಶನ ನೀಡುತ್ತಿರುತ್ತದೋ ಅಲ್ಲಿವರೆಗೂ ಜನ ನಿಮ್ಮನ್ನು ಪ್ರಶಂಸಿಸುತ್ತಾರೆ. ಒಂದುವೇಳೆ ತಂಡ ಒಂದೆರಡು ಪಂದ್ಯಗಳನ್ನು ಸೋತಿತು ಎಂದಾದಲ್ಲಿ ಉಳಿದ 15 ಮಂದಿಯನ್ನು ಟೀಕಿಸುವುದಿಲ್ಲ. ಬದಲಾಗಿ ನೆಹ್ರಾನನ್ನು ಕೈಬಿಡಬೇಕಿತ್ತು ಎಂದು ಹೇಳುತ್ತಾರೆ. ನನ್ನ ಪ್ರಕಾರ ವಯಸ್ಸೆಂಬುದು ಒಂದು ನಂಬರ್ ಅಷ್ಟೇ. ಅದು ನನ್ನ ಮೇಲೆ ಪರಿಣಾಮ ಬೀರದು' ಎಂದಿದ್ದಾರೆ.
ತಮ್ಮ 37ನೇ ವಯಸ್ಸಿನಲ್ಲೂ ಕರಾರುವಕ್ಕಾದ ದಾಳಿ ನಡೆಸುತ್ತಿರುವ ಎಡಗೈ ವೇಗಿ ಎರಡನೇ ಪಂದ್ಯದಲ್ಲಿ ಅಮೂಲ್ಯ ಮೂರು ವಿಕೆಟ್ ಪಡೆಯುವಲ್ಲಿ ನೆಹ್ರಾ ಯಶಸ್ವಿಯಾಗಿದ್ದರು. ಇನ್ನೂ ನೆಹ್ರಾ ಪ್ರದರ್ಶನವನ್ನು ನಾಯಕ ವಿರಾಟ್ ಕೊಹ್ಲಿ ಕೂಡ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
