Asianet Suvarna News Asianet Suvarna News

ISSF ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಮತ್ತೆರಡು ಪದಕ..!

* ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಪಾಲಾದ ಮತ್ತೆರಡು ಪದಕಗಳು
* ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಅಂಜುಮ್‌ ಮೌದ್ಗಿಲ್‌ಗೆ ಕಂಚು
* ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಭಾರತಕ್ಕೆ ಒಲಿದ ಬೆಳ್ಳಿ

ISSF Shooting World Cup Anjum Moudgil Clinches Bronze Medal kvn
Author
Bengaluru, First Published Jul 18, 2022, 9:43 AM IST

ಚಾಂಗ್‌ವೊನ್‌(ಜು.18): ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ಗಳು ಮತ್ತೆರಡು ಪದಕಗಳನ್ನು ಬಾಚಿಕೊಂಡಿದ್ದಾರೆ. ಭಾನುವಾರ ಮಹಿಳೆಯರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಅಂಜುಮ್‌ ಮೌದ್ಗಿಲ್‌ 402.9 ಅಂಕಗಳೊಂದಿಗೆ ಕಂಚು ತಮ್ಮದಾಗಿಸಿಕೊಂಡರು. ಅವರು ಕಳೆದ ತಿಂಗಳು ನಡೆದ ಬಾಕು ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 

ಇದೇ ವೇಳೆ ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸಂಜೀವ್‌ ರಜಪೂತ್‌, ಚೈನ್‌ ಸಿಂಗ್‌ ಹಾಗೂ ಐಶ್ವರಿ ಪ್ರತಾಪ್‌ ತೋಮರ್‌ ಅವರನ್ನೊಳಗೊಂಡ ತಂಡ ಬೆಳ್ಳಿ ಗೆದ್ದುಕೊಂಡಿತು. ಭಾರತ ಕೂಟದಲ್ಲಿ 4 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಕಿರಿಯರ ರಾಷ್ಟ್ರೀಯ ಈಜು: ರಾಜ್ಯದ ಹರ್ಷಿಕಾ 2 ದಾಖಲೆ

ಭುವನೇಶ್ವರ: ಕಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಹರ್ಷಿಕಾ ರಾಮಚಂದ್ರ ಎರಡು ನೂತನ ಕೂಟ ದಾಖಲೆಗಳನ್ನು ಬರೆದಿದ್ದಾರೆ. ಬಾಲಕಿಯರ 400 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಹರ್ಷಿಕಾ 4 ನಿಮಿಷ 29.25 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಕರ್ನಾಟಕದವರೇ ಆದ ರುಜುಲಾ ಬೆಳ್ಳಿ ಜಯಿಸಿದರು. 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಹರ್ಷಿಕಾ 2 ನಿಮಿಷ 23.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3 ವರ್ಷದ ಹಿಂದೆ ಅಪೇಕ್ಷಾ ಫರ್ನಾಂಡಿಸ್‌(2 ನಿಮಿಷ 23.67 ಸೆಕೆಂಡ್‌) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. 

Singapore Open 2022: ಚೊಚ್ಚಲ ಬಾರಿಗೆ ಸಿಂಧು ಮುಡಿಗೆ ಸಿಂಗಾಪುರ ಓಪನ್ ಪ್ರಶಸ್ತಿ ಗರಿ

ಇದೇ ವಿಭಾಗದಲ್ಲಿ ಕರ್ನಾಟಕದ ತನಿಶಿ ಗುಪ್ತಾ ಬೆಳ್ಳಿ ಜಯಿಸಿದರು. ಕೂಟದಲ್ಲಿ ಕರ್ನಾಟಕ ಒಟ್ಟು 31 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ 17, ತೆಲಂಗಾಣ 8 ಪದಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌: ಭಾರತಕ್ಕೆ 3ನೇ ಸೋಲು, ಔಟ್‌

ಜಕಾರ್ತ: ಭಾರತ ಪುರುಷರ ಬಾಸ್ಕೆಟ್‌ಬಾಲ್‌ ತಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಸತತ 3ನೇ ಸೋಲಿನೊಂದಿಗೆ ಹೊರಬಿದ್ದಿದೆ. ಭಾನುವಾರ ನಡೆದ ‘ಡಿ’ ಗುಂಪಿನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಲೆಬಾನನ್‌ ವಿರುದ್ಧ 63-104 ಅಂಕಗಳಲ್ಲಿ ಸೋಲುಂಡಿತು. ಗುಂಪಿನಲ್ಲಿ 4ನೇ ಸ್ಥಾನ ಪಡೆದ ಭಾರತ, ಪ್ಲೇ-ಆಫ್‌ ಪಂದ್ಯಕ್ಕೂ ಅರ್ಹತೆ ಪಡೆಯಲಿಲ್ಲ. ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ನೇರವಾಗಿ ಕ್ವಾರ್ಟರ್‌ಗೇರಿದರೆ, 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಪ್ಲೇ-ಆಫ್‌ ಪಂದ್ಯದಲ್ಲಿ ಆಡಿ ಗೆದ್ದು ಕ್ವಾರ್ಟರ್‌ ಫೈನಲ್‌ಗೇರಬಹುದು. ಭಾರತ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 47-100, 2ನೇ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ ವಿರುದ್ಧ 59-101 ಅಂಕಗಳಲ್ಲಿ ಸೋಲುಂಡಿತ್ತು.
 

Follow Us:
Download App:
  • android
  • ios