ಸುನಿಲ್ ಚೆಟ್ರಿ 150ನೇ ಪಂದ್ಯ- ಗೆಲುವಿನ ಉಡುಗೊರೆ ನೀಡಿದ ಬೆಂಗಳೂರು FC

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ ಡೈನಾಮೋಸ್ ವಿರುದ್ಧದ ರೋಚಕ ಹೋರಾಟದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಗೆಲವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

ISL 2018 Bengaluru FC beat Delhi Dynamos by 1-0 tribute to Sunil Chhetri

ಬೆಂಗಳೂರು(ನ.26): ಉದಾಂತ್ ಸಿಂಗ್ (87ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 1-0 ಗೋಲಿನಿಂದ ಜಯಗಳಿಸಿ ನಾಯಕ ಸುನಿಲ್ ಛೆಟ್ರಿ ಗೆ ಜಯದ ಉಡುಗೊರೆ ನೀಡಿತು.  ಈ ಜಯದೊಂದಿಗೆ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. 

ಕಂಠೀರವ ಕ್ರೀಡಾಂಗಣ ನಿನ್ನೆಯ ದಿನ ನೋವಿನ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ನಟ, ರಾಜಕಾರಣ ಅಂಬರೀಶ್ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿತ್ತು.  ಆದರೆ ಸೋಮವಾರ ಅಲ್ಲಿಯ ದೃಶ್ಯವೇ ಬೇರೆಯಾಗಿತ್ತು, ಅಲ್ಲಿ ಫುಟ್ಬಾಲ್ ಸಂಭ್ರಮ ಮನೆ ಮಾಡಿತ್ತು. 

ಡೆಲ್ಲಿ ಡೈನಮೋಸ್ ಹಾಗೂ ಬೆಂಗಳೂರು ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್‌ನ  40ನೇ ಪಂದ್ಯದ ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಸ್ವೀಡ್ ಸ್ಟಾರ್ ಉದಾಂತ್ ಸಿಂಗ್ ಗೋಲು ಗಳಿಸಿ ಬೆಂಗಳೂರು ಎಫ್‌ಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯ ಮುಕ್ತಾಯಗೊಂಡಾದ ಬೆಂಗಳೂರು 1-0 ಅಂತರ ಗೆಲುವು ಸಾಧಿಸಿತು. 

ಇದುವರೆಗೂ ಬೆಂಗಳೂರು ಎಫ್ ಸಿ ಪರ 150 ಪಂದ್ಯಗಳನ್ನಾಡಿರುವ ನಾಯಕ ಸುನಿಲ್ ಛೆಟ್ರಿಗೆ 150 ನೇ ನಂಬರಿನ ಜೆರ್ಸಿ ನೀಡಿ ಗೌರವಿಸಲಾಯಿತು. 2013ರಲ್ಲಿ ಬೆಂಗಳೂರು ಎಫ್ ಸಿ ಸೇರಿದ ಛೆಟ್ರಿ  ಇದುವರೆಗೂ 75 ಗೋಲುಗಳನ್ನು ಗಳಿಸಿದ್ದಾರೆ. ಛೆಟ್ರಿ ನಾಯಕತ್ವದಲ್ಲಿ ಬೆಂಗಳೂರು ತಂಡ ಕಳೆದ ಬಾರಿಯ ಐ ಎಸ್ ಎಲ್ ನಲ್ಲಿ ಫೈನಲ್ ತಲುಪಿತ್ತು.

 

 

Latest Videos
Follow Us:
Download App:
  • android
  • ios