ಬಂದೋಬಸ್ತ್'ಗೆ ನೀಡಲಾಗುವ ಹೆಲ್ಮೆಟ್ ಬಳಸಬಾರದು. ಕರ್ತವ್ಯದಲ್ಲಿ ಇದ್ದಾಗ ಹಾಗೆಯೇ ರಜೆಯಲ್ಲಿದ್ದಾಗಲೂ. ಐಎಸ್'ಐ ಗುರುತಿನ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೇ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಲ್ಲಾ ಪೊಲೀಸ್ ಸಿಬ್ಬಂದಿಗೆ ಸುಬ್ರಹ್ಮಣ್ಯೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರು(ಜ.06): ಪೊಲೀಸ್ ಸಿಬ್ಬಂದಿಗಳು ದ್ವಿಚಕ್ರ ವಾಹನ ಓಡಿಸುವಾಗ ಕಡ್ಡಾಯವಾಗಿ ಐಎಸ್'ಐ ಗುರುತಿನ ಹೆಲ್ಮೆಟ್ ಧರಿಸಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.

ಬಂದೋಬಸ್ತ್'ಗೆ ನೀಡಲಾಗುವ ಹೆಲ್ಮೆಟ್ ಬಳಸಬಾರದು. ಕರ್ತವ್ಯದಲ್ಲಿ ಇದ್ದಾಗ ಹಾಗೆಯೇ ರಜೆಯಲ್ಲಿದ್ದಾಗಲೂ. ಐಎಸ್'ಐ ಗುರುತಿನ ಹೆಲ್ಮೆಟ್ ಧರಿಸಬೇಕು. ಇಲ್ಲವಾದರೇ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಲ್ಲಾ ಪೊಲೀಸ್ ಸಿಬ್ಬಂದಿಗೆ ಸುಬ್ರಹ್ಮಣ್ಯೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಐಎಸ್'ಐ ಗುರುತಿನ ಹೆಲ್ಮೆಟ್ ಧರಿಸಲು ಠಾಣಾಧಿಕಾರಿ ಸೂಚಿಸಬೇಕು. ಹೆಲ್ಮೆಟ್ ಧರಿಸದಿದ್ದರೇ ಘಟಕದ ಮುಖ್ಯಸ್ಥರೇ ನೇರ ಹೊಣೆ. ಅವರ ವಿರುದ್ದವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.